ಚಾಮರಾಜನಗರ ಜಿಲ್ಲಾಡಳಿತದಿಂದ ಎಡವಟ್ಟು: ದೇವಸ್ಥಾನದಲ್ಲಿದ್ದ ಮೈಸೂರು ಮಹಾರಾಜರ ಫೋಟೋಗಳು ತೆರವು.

Promotion

ಚಾಮರಾಜನಗರ,ಸೆಪ್ಟಂಬರ್,12,2021(www.justkannada.in): ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನ ನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಮೈಸೂರು ಮಹಾರಾಜರ ಫೋಟೋಗಳನ್ನ ತೆರವು ಮಾಡುವುದರ ಮೂಲಕ ಚಾಮರಾಜನಗರ ಜಿಲ್ಲಾಡಳಿತದಿಂದ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಈ ಮೂಲಕ ಮೈಸೂರು ಮಹಾರಾಜರಿಗೆ ಅವಮಾನವಾದಂತಾಗಿದೆ. ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನ ನಾಥಸ್ವಾಮಿ ದೇವಾಲಯದಲ್ಲಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಫೋಟೋಗಳನ್ನ ಹಾಕಲಾಗಿತ್ತು. ದೇವಸ್ಥಾನದ ಏಳಿಗೆಗೆ ಮಹಾರಾಜರ ಕೊಡುಗೆಯ ನೆನಪಿಗಾಗಿ ಫೋಟೋಗಳನ್ನ ಹಾಕಲಾಗಿತ್ತು. ಮಹಾರಾಜರು ಬಿಳಿಗಿರಿರಂಗಾನಾಥಸ್ವಾಮಿಗೆ ಚಿನ್ನ ಬೆಳ್ಳಿ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದರು.

ಜೀರ್ಣೋದ್ಧಾರ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದ  ಸಂದರ್ಭದಲ್ಲಿ ಸತ್ತವರ ಫೋಟೋ ಏಕೆ ಹಾಕಿದ್ದೀರಿ  ? ತೆಗೆದು ಹಾಕಿ ಎಂದು ಹಿರಿಯ ಅಧಿಕಾರಿಯ ಸೂಚನೆ  ನೀಡಿದ್ದರು. ಹಿರಿಯ ಅಧಿಕಾರಿಯ ಸೂಚನೆ ಮೇರೆಗೆ ಮಹಾರಾಜರ ಫೋಟೋಗಳ ತೆರವು ಮಾಡಲಾಗಿದೆ.

ಇದೀಗ ಹಿರಿಯ ಅಧಿಕಾರಿಯ ಸೂಚನೆ ವಿವಾದಕ್ಕೆ ಕಾರಣವಾಗಿದೆ.  ಇದು ಮಹಾರಾಜರಿಗೆ ಮಾಡಿದ ಅವಮಾನ ಎಂದು ಮಹಾರಾಜರ ಫೋಟೋ ತೆರವಿಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರವು ಮಾಡಿದ ಫೋಟೋಗಳನ್ನು ಆಡಳಿತ ಮಂಡಳಿ ಕಚೇರಿಯೊಳಗೆ ಇಟ್ಟುಕೊಂಡಿದೆ.

Key words: Chamarajanagar- District- Mysore- Maharaja- Photos – temple.