ಗಂಡಸಾಗಿದ್ರೆ ಆಡಿಯೋ ರಿಲೀಸ್ ಮಾಡು ಎಂದು ಇಂದ್ರಜಿತ್ ಲಂಕೇಶ್ ಗೆ ಸವಾಲು: ದೊಡ್ಮನೆ ಪ್ರಾಪರ್ಟಿ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ನಟ ದರ್ಶನ್ 

Promotion

 ಮೈಸೂರು,ಜುಲೈ,17,2021(www.justkannada.in): ನಾನು ಮಾತನಾಡಿರುವ ಆಡಿಯೋ ಇದೆ ಅಂತಿದ್ದಾರೆ. ಗಂಡಸಾಗಿದ್ರೆ ಇಂದ್ರಜಿತ್ ಲಂಕೇಶ್ ಇಂದೇ ಆಡಿಯೋ ಬಿಡುಗಡೆ ಮಾಡಲಿ ಎಂದು ನಟ ಚಾಲೇಂಜಿಂಗ್ ಸ್ಟಾರ್ ದರ್ಶನ್ ನೇರ ಸವಾಲು ಹಾಕಿದರು.jk

ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ನಟ ದರ್ಶನ್, ನಾನು ಮಾತನಾಡಿರುವಂತ ಆಡಿಯೋವೊಂದು ಇದೆ ಎಂದು ಹೇಳಿದ್ದಾರೆ.  ಅದನ್ನು ಗಂಡಸೇ ಆಗಿದ್ದರೇ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಲಿ. ಆನಂತ್ರ ಏನೇ ಬರಲೀ ನಾನು ಅದನ್ನು ಸವಾಲ್ ಆಗಿ ಸ್ವೀಕರಿಸುತ್ತೇನೆ ಸವಾಲ್ ಹಾಕಿದರು.

ನನ್ನನ್ನ ಇಂದ್ರಜಿತ್ ಅವಿದ್ಯಾವಂತ ಎಂದಿದ್ದಾರೆ. ಇಂದ್ರಜಿತ್ ಎಷ್ಟು ದಾಖಲೆ ಬೇಕಾದರೂ ರಿಲೀಸ್ ಮಾಡಲಿ. ಇನ್ನು ಸಾವಿರ ಆಡಿಯೋ ವಿಡಿಯೋ  ಬಿಡುಗಡೆ ಮಾಡಲಿ. ನಾನು ಸಿನಿಮ ನಿರ್ದೇಶನ ಮಾಡಿದ್ದೇನೆ. ಸಿನಿಮಾ ನಿರ್ದೇಶನ ಅಷ್ಟು ಸುಲಭವಲ್ಲ. ಇಂದ್ರಜಿತ್ ನೆಟ್ಟಗೆ ಒಂದು ಸಿನಿಮಾ ನಿರ್ದೇಶನ ಮಾಡಲಿ ಎಂದು ನಟ ದರ್ಶನ್ ಟಾಂಗ್ ನೀಡಿದರು.

ಇವತ್ತಲ್ಲ ನೂರು ವರ್ಷ ದೊಡ್ಮೆನ ದೊಡ್ಮನೇನೆ..

ಈವರೆಗೆ ನಾನು ಸುಮ್ಮನೇ ಇದ್ದೆ 25 ಕೋಟಿ ವಂಚನೆ ಕೇಸ್ ಡೈವರ್ಟ್ ಮಾಡುತ್ತಿದ್ದಾರೆ . ಬೇಕಂತಲೆ ನನ್ನನ್ನ ಪ್ರಚೋದಿಸುತ್ತಿದ್ದಾರೆ. ಯಾಕೆ ಪ್ರಕರಣ ದೊಡ್ಮನೇ ಕಡೆ ಹೋಗುತ್ತಿದೆ. ಯಾವುದೇ ಕಾರಣಕ್ಕೂ ಇದಕ್ಕೂ ದೊಡ್ಮನೆ ಫ್ಯಾಮಿಲಿಗೂ ಸಂಬಂಧವಿಲ್ಲ.  ದೊಡ್ಮನೆ ವಿಚಾರದಲ್ಲಿ ಯಾರು ಗೊಂದಲ ಮಾಡಲು ಆಗಲ್ಲ. ಇದೇ ರಾಜಕುಮಾರ್ ಕಂಪನಿಯಲ್ಲೇ ನಮ್ಮ ಅಪ್ಪ ಇದ್ದುದ್ದು.  ಇವತ್ತಲ್ಲ ನೂರು ವರ್ಷ ದೊಡ್ಮೆನ ದೊಡ್ಮನೇನೆ. ನಾನೂ ಇದೇ ದೊಡ್ಮನೇ ಕುಟುಂಬದಲ್ಲಿ ಬೆಳೆದು ಬಂದಿದ್ದೇನೆ. ರಾಜ್ ಕುಮಾರ್ ಬ್ಯಾನರ್ ನಿಂದಲೇ ನಾವು ಅನ್ನ ತಿಂದಿದ್ದು.  ದೊಡ್ಮನೆ ಮುಂದೆ  ನಾವು ಹುಲ್ಲಿಗೂ ಸಮ ಇಲ್ಲ ಎಂದು ನಟ ದರ್ಶನ್ ದೊಡ್ಮನೆಗೆ ಬಹುಪರಾಕ್ ಎಂದರು.

ಉಮಾಪತಿ ವಿರುದ್ದ ವಾಗ್ದಾಳಿ ನಡೆಸಿದ ನಟ ದರ್ಶನ್, ಇದೆಲ್ಲಾ ಉಮಾಪತಿಯಿಂದಲೇ ಡೈವರ್ಟ್ ಆಗ್ತಿದೆ. ದೊಡ್ಮನೆ ವಿಚಾರ ಬರದಿದ್ರೆ ನಾನು ರಿಯಾಕ್ಟ್ ಮಾಡ್ತಿರಲಿಲ್ಲ. ನಾವೆಲ್ಲ ಮೂರು ಬಿಟ್ಟು ನಿಂತವರೇ. ಬೇಕಂತಲೇ ನನ್ನನ್ನು ಪ್ರಚೋದನೆ ಮಾಡ್ತಿದ್ದಾರೆ. ನನ್ನ ವಿಚಾರದಲ್ಲಿ ತುಂಬಾ ಜನ ಆಡವಾಡ್ತಿದಾರೆ. ನಾನೇನು ಕೊಲೆ ಮಾಡಿದಿನಾ? ತಾಕತ್ತಿದ್ರೆ ಇಂದ್ರಜಿತ್ ಒಂದು ಚಿತ್ರ ನಿರ್ದೇಶನ ಮಾಡಲಿ.ನಾನು ಮೆಜೆಸ್ಟಿಕ್ ಮಾಡಲು ರೆಡಿ, ಸಂಗೊಳ್ಳಿ ರಾಯಣ್ಣ ಮಾಡಲು ರೆಡಿ. ಇಂದ್ರಜಿತ್ ಬಳಿ ನಾನು ಮಾತನಾಡಿರುವ ಆಡಿಯೋ ಇದೆ. ಗಂಡಸಾಗಿದ್ರೆ ಅದನ್ನು ಬಿಡುಗಡೆ ಮಾಡಲಿ. ಅವಾಗಾ ಗೊತ್ತಾಗುತ್ತೆ. ಗಾಂಡುಗಿರಿ ಯಾರದು ಅಂತಾ. ನಾನು ಯಾರಿಗೂ ಆನ್ಸರೇಬಲ್ ಅಲ್ಲ. ನನ್ನ ಅಭಿಮಾನಿಗಳಿಗೆ ಮಾತ್ರ ಆನ್ಸರೆಬಲ್ ಎಂದರು.

Key words: Challenge -Indrajit Lankesh – Audio –Release-actor  Darshan