ಸಿಇಟಿ ಫಲಿತಾಂಶ ಪ್ರಕಟ: ಟಾಪರ್ಸ್ ಇವರೇ ನೋಡಿ…

Promotion

ಬೆಂಗಳೂರು, ಆಗಸ್ಟ್, 21, 2020(www.justkannada.in):  ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಲಾಗಿದ್ದ ಸಿಇಟಿ ಫಲಿತಾಂಶವನ್ನ ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದು ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು ಆರ್ ವಿ ಕಾಲೇಜು ವಿದ್ಯಾರ್ಥಿನಿ ಎಂ.ರಕ್ಷಿತಾ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.jk-logo-justkannada-logo

ಇಂಜಿನಿಯರಿಂಗ್ ವಿಭಾಗದಲ್ಲಿ  ಉಳಿದಂತೆ ದ್ವಿತೀಯ ಸ್ಥಾನವನ್ನು ಶುಭನ್, ತೃತೀಯ ಸ್ಥಾನವನ್ನು ಶಶಾಂಕ್ ಬಾಲಾಜಿ ತಮ್ಮದಾಗಿಸಿಕೊಂಡಿದ್ದಾರೆ.

ಪಶು ವೈದ್ಯಕೀಯ ವಿಭಾಗ:  ಸಾಯಿ ವಿವೇಕ್ ಮೊದಲ ರ್ಯಾಂಕ್, ಆರ್ಯನ್ ಮಹಾಲಿಂಗಪ್ಪ ದ್ವಿತೀಯ ರ್ಯಾಂಕ್, ಕೆ.ಸಂಜನಾ ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.CET-Result –Published- Toppers

ಕೃಷಿ ವಿಭಾಗದಲ್ಲಿ :  ಮಂಗಳೂರು ಕಾಲೇಜಿನ ವರುಣ್ ಗೌಡ(ಮೊದಲ ರ್ಯಾಂಕ್), ಮೈಸೂರಿನ ಕೆ.ಸಂಜನಾ ದ್ವೀತಿಯ ರ್ಯಾಂಕ್, ಲೊಕೇಶ್ ಬಿ.ಜೋಗಿ ತೃತೀಯ ರ್ಯಾಂಕ್ ಪಡೆದುಕೊಂಡಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅಭಿನಂದನೆ ಸಲ್ಲಿಸಿದ್ದಾರೆ. ಅಕ್ಟೋಂಬರ್ ನಲ್ಲಿ ಕೌನ್ಸೆಲಿಂಗ್ ನಡೆಸುವುದಾಗಿ ತಿಳಿಸಿದ್ದಾರೆ.

Key words: CET-Result –Published- Toppers