‘ಸೆಂಟ್ರಲ್ ವಿಸ್ತಾ’ ಕಾಮಗಾರಿ ಮುಂದುವರಿಕೆ ಭವಿಷ್ಯ ನಾಳೆ ತೀರ್ಮಾನ

Promotion

ಬೆಂಗಳೂರು, ಮೇ 30,2021 (www.justkannada.in): ‘ಸೆಂಟ್ರಲ್‌ ವಿಸ್ತಾ’‌ ಯೋಜನೆ ಕಾಮಗಾರಿ ಸಂಬಂಧ ನಾಳೆ ಪ್ರಮುಖ ತೀರ್ಪು ಹೊರಬೀಳಲಿದೆ.

‘ಸೆಂಟ್ರಲ್‌ ವಿಸ್ತಾ’‌ ಯೋಜನೆ ಕಾರ್ಯವನ್ನು ಮುಂದುವರಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ದೆಹಲಿ ಹೈಕೋರ್ಟ್ ನಾಳೆ (ಸೋಮವಾರ) ತೀರ್ಪು ನೀಡಲಿದೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ಎನ್‌. ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರ ನ್ಯಾಯಪೀಠವು ಇದೇ 31ರಂದು ತೀರ್ಪು ನೀಡಲು ನಿರ್ಧರಿಸಿದೆ.