ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಎಂದ ‘ಕೈ’ ಶಾಸಕ…..

Promotion

ಬೆಂಗಳೂರು,ಮಾರ್ಚ್,18,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೊಳಿ  ರಾಸಲೀಲೆ ಸಿಡಿ ಬಿಡುಗಡೆಪ್ರಕರಣ ರಮೇಶ್ ಜಾರಕಿಹೊಳಿ ವಿರುದ್ಧ ಮಾಡಿರುವ ಷಡ್ಯಂತ್ರ ಎಂದು ಕಾಂಗ್ರೆಸ್ ಶಾಸಕ ರಾಮಪ್ಪ ತಿಳಿಸಿದ್ದಾರೆ.jk

ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಪ್ಪ ಭೇಟಿ ನೀಡಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ  ಶಾಸಕ ರಾಮಪ್ಪ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ.  4 ರಿಂದ 5 ಜನ ಸೇರಿಕೊಂಡು ಷಡ್ಯಂತ್ರ ಮಾಡಿದ್ದಾರೆ ಎಂದು  ಹೇಳಿದರು.CD case -Ramesh jarakiholi-Congress- MLA- ramappa-meet

ಸಿಡಿ ಪ್ರಕರಣದಲ್ಲಿ ಮಹಾನಾಯಕನ ಕೈವಾಡವಿದೆ ಎಂಬ ಹೇಳಿಕೆ ಕುರಿತು  ಪ್ರತಿಕ್ರಿಯಿಸಿದ ಶಾಸಕ ರಾಮಪ್ಪ,  ರಮೇಶ್ ಜಾರಕಿಹೊಳಿ ಮಹಾನಾಯಕ ಎಂದು ಹೇಳಿದ್ದಾರೆ, ಆದರೆ ಎಲ್ಲೂ ಕೆಪಿಸಿಸಿ ಅಧ್ಯಕ್ಷ ಎಂದು ಹೇಳಿಲ್ಲ. ಸತ್ಯಾಂಶ ತಿಳಿಯದೇ ಯಾರ ಹೆಸರನ್ನೂ ಹೇಳಬಾರದು. ಸಂಪೂರ್ಣ ತನಿಖೆಯಾದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದರು.

Key words: CD case -Ramesh jarakiholi-Congress- MLA- ramappa-meet