ಸಿಡಿ ಪ್ರಕರಣ ಉಪಚುನಾವಣೆಯಲ್ಲಿ ನಮಗೆ ಪ್ಲಸ್ ಅಥವಾ ಮೈನಸ್ ಆಗುವುದಿಲ್ಲ- ಸತೀಶ್ ಜಾರಕಿಹೊಳಿ….

Promotion

ಬೆಳಗಾವಿ,ಮಾರ್ಚ್,22,2021(www.justkannada.in): ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣ ಉಪ ಚುನಾವಣೆಯಲ್ಲಿ ನಮಗೆ ಪ್ಲಸ್ ಅಥವಾ ಮೈನಸ್ ಆಗುವುದಿಲ್ಲ. ಆ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಲು ಪಕ್ಷದ ವೇದಿಕೆಯಲ್ಲಿ ನಿರ್ಧಾರ ಆಗಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ್ ಜಾರಕಿಹೊಳಿ ತಿಳಿಸಿದರು.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿ.ಡಿ. ಪ್ರಕರಣ ಬಹಿರಂಗವಾದ ಬಳಿಕ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿಲ್ಲ. ಮಾರ್ಚ್ 23ರಂದು ಬೆಂಗಳೂರಿಗೆ ಹೋಗುತ್ತೇನೆ. ಅವಕಾಶ ಸಿಕ್ಕರೆ ಮಾತನಾಡುತ್ತೇನೆ’  ಎಂದು ತಿಳಿಸಿದರು.

ಇನ್ನು ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ, ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ದುರಾಡಳಿತ  ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಏನು ಕೆಲಸಗಳಾಗಿವೆ? ಬಿಜೆಪಿ ಏನು ಮಾಡಿದೆ ಎನ್ನುವ ಮೇಲೆ ಚುನಾವಣೆ ನಡೆಯುತ್ತದೆ. ಜನರೂ ಜಾಗೃತರಾಗಿದ್ದಾರೆ’ ಎಂದರು.

Key words: cd case- by-election -does not – plus or minus-Satish jarakiholi