ನಕಲಿ ಮಾರ್ಕ್ಸ್ ಕಾರ್ಡ್ ಅಡ್ಡೆ ಮೇಲೆ ಸಿಸಿಬಿ ದಾಳಿ: 6800 ನಕಲಿ ಅಂಕಪಟ್ಟಿಗಳು ವಶಕ್ಕೆ.

Promotion

ಬೆಂಗಳೂರು,ಜನವರಿ,27,2023(www.justkannada.in):  ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಅಡ್ಡೆ ಮೇಲೆ ಸಿಸಿಬಿ  ದಾಳಿ ನಡೆಸಿ  6800 ನಕಲಿ ಅಂಕಪಟ್ಟಿಗಳನ್ನ ವಶಕ್ಕೆ ಪಡೆದಿದೆ.

ಮಾಹಿತಿ ಆಧರಿಸಿ ದಾಳಿ ನಡೆಸಿ ಸಿಸಿಬಿ ಪೊಲೀಸರು ಓರ್ವನನ್ನ ಬಂಧಿಸಿ 15 ವಿವಿಗಳು, ಬೋರ್ಡ್ ಗಳ ನಕಲಿ ಅಂಕಪಟ್ಟಿಯನ್ನ ವಶಕ್ಕೆ ಪಡೆದಿದ್ದಾರೆ.   ವಿಕಾಸ್ ಎಂಬಾತ ಬಂಧಿತ ಆರೋಪಿ. ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ದಂಧೆ ಬಯಲಾಗಿದ್ದು 6800 ನಕಲಿ  ಅಂಕಪಟ್ಟಿಗಳು ತಯಾರಿಸಲು ಬಳಸಲಾಗುತ್ತಿದ್ದ ಟೆಕ್ನಿಕಲ್ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ವಿವಿ, ಕುವೆಂಪು ವಿವಿ, ಅಣ್ಣಾಮಲೈ ವಿವಿ, ಜನಾರ್ದನ ರೈ ವಿವಿ,  ಸಿಂಗಾನಿಯಾ ವಿವಿ, ಮಂಗಳೂರು ವಿವಿ ಸೇರಿ ಹಲವು ವಿವಿಗಳ ನಕಲಿ ಅಂಕಪಟ್ಟಿಗಳು ಪತ್ತೆಯಾಗಿದೆ ಎನ್ನಲಾಗಿದೆ.

Key words: CCB- raid – fake -marks –card- 6800 -seized.