ಸಿಸಿಬಿ ಪೊಲೀಸರ ಕಾರ್ಯಾಚರಣೆ: 34 ಡ್ರಗ್ಸ್ ಪೆಡ್ಲರ್ ಗಳ ಬಂಧನ.

Promotion

ಬೆಂಗಳೂರು,ಸೆಪ್ಟಂಬರ್,12,2023(www.justkannada.in):  ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ  34 ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಿದ್ದಾರೆ.

ವಿದೇಶಿ ಪ್ರಜೆ ಸೇರಿ 34 ಡ್ರಗ್ ಪೆಡ್ಲರ್​ಗಳನ್ನು ಪೊಲೀಸರು ಬಂಧಿಸಿದ್ದಾರೆ. 24 ಪ್ರಕರಣಗಳ ಸಂಬಂಧ 34 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 2 .42 ಕೋಟಿ ರೂ. ಹೆಚ್ಚು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇರಳ ಮೂಲದ 15, ರಾಜ್ಯದ 10, ಬಿಹಾರದ ನಾಲ್ವರು ಆರೋಪಿಗಳು, ಒಡಿಶಾದ ಇಬ್ಬರು, ಅಸ್ಸಾಂ & ಹರಿಯಾಣ ಮೂಲದ ತಲಾ ಒಬ್ಬರು, ನೈಜೀರಿಯಾ ಪ್ರಜೆಯನ್ನು ಬಂಧಿಸಿ ಡ್ರಗ್ಸ್​ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.

Key words: CCB- Police- operation-34 drug –peddlers- arrested.