ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ದಾಳಿ: ಆರು ಯುವತಿಯರ ರಕ್ಷಣೆ…

Promotion

ಬೆಂಗಳೂರು,ಜ,27,2020(www.justkannada.in): ಬೆಂಗಳೂರಿನಲ್ಲಿ ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರು ಯುವತಿಯರನ್ನ ರಕ್ಷಣೆ ಮಾಡಿದ್ದಾರೆ.

ವಿವೇಕನಗರದ ಈಜಿಪುರದಲ್ಲಿ ಸ್ಪಾವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸೂರ್ಯನನ್ನ ಬಂಧಿಸಿ ಹಣ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಆರು ಯುವತಿಯನ್ನ ರಕ್ಷಿಸಲಾಗಿದೆ.

ಇನ್ನು ಗಿರಾಕಿಗಳನ್ನ ಸಂಪರ್ಕಿಸಿದ್ದ  ಪ್ರಜ್ವಲ್ ಹಾಗೂ ಗುರುರಾಜ್ ಪರಾರಿಯಾಗಿದ್ದಾರೆ.

Key words: CCB -attack – spa – prostitute-bangalore