ಫೆಬ್ರವರಿ 15ರಿಂದ ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಅಂತಿಮ ಪರೀಕ್ಷೆ

Promotion

ಬೆಂಗಳೂರು, ಡಿಸೆಂಬರ್ 11, 2022 (www.justkannada.in): ಸಿಬಿಎಸ್‍ಇ 10ನೇ ಮತ್ತು 12ನೇ ತರಗತಿಗಳ ಅಂತಿಮ ಪರೀಕ್ಷೆ ಫೆಬ್ರವರಿ 15ರಿಂದ ಆರಂಭವಾಗಲಿದೆ. ಆದರೆ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಇನ್ನೂ ನಿಗದಿಪಡಿಸಿಲ್ಲ.

2023ರ ಜನವರಿ 1ರಿಂದ ಪ್ರಾಕ್ಟಿಕಲ್ ಪರೀಕ್ಷೆಗಳು ಅರಂಭವಾಗಲಿವೆ ಎಂದು ಸಿಬಿಎಸ್‍ಇ ಮಂಡಳಿ ಪ್ರಕಟಿಸಿದೆ.

ಪ್ರಾಕ್ಟಿಕಲ್ ಪರೀಕ್ಷೆಗಳಿಗಾಗಿ ಪಠ್ಯಕ್ರಮವನ್ನು 2023ರ ಜನವರಿ 1ರ ಒಳಗಾಗಿ ಪೂರ್ಣಗೊಳಿಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

12ನೇ ತರಗತಿಯ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಸಿಬಿಎಸ್‍ಇ ಮಂಡಳಿ ನೇಮಕ ಮಾಡಿದ ಬಾಹ್ಯ ಪರೀಕ್ಷಕರು ನಡೆಸಲಿದ್ದಾರೆ. ಹತ್ತನೇ ತರಗತಿಯ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಆಂತರಿಕ ಪರೀಕ್ಷಕರೇ ನಡೆಸುತ್ತಾರೆ.