ಡಿಕೆ ಶಿವಕುಮಾರ್ ತಪ್ಪು ಮಾಡಿಲ್ಲ ಅಂದ್ರೆ ಹೆದರುವ ಅಗತ್ಯವಿಲ್ಲ – ಸಚಿವ ಜಗದೀಶ್ ಶೆಟ್ಟರ್…

Promotion

ಹುಬ್ಬಳ್ಳಿ,ಅಕ್ಟೋಬರ್,6,2020(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ , ಡಿಕೆ ಶಿವಕುಮಾರ್ ತಪ್ಪು ಮಾಡಿಲ್ಲ ಅಂದ್ರೆ ಹೆದರುವ ಅಗತ್ಯವಿಲ್ಲ. ಡಿಕೆಶಿ ಬೇಕಾದ್ರೆ ಕಾನೂನು ಹೋರಾಟ ಮಾಡಲಿ ಎಂದರು.jk-logo-justkannada-logo

ಇಂದು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್,  ಸಿಬಿಐ ಸುಮ್ಮನೆ ದಾಳಿ ಮಾಡಲ್ಲ. ದಾಖಲೆ ಕಲೆಹಾಕಿ ಪೂರ್ವ ಸಿದ್ಧತೆಯೊಂದಿಗೆ ದಾಳಿ ಮಾಡುತ್ತದೆ.  ಡಿ.ಕೆ ಶಿವಕುಮಾರ್ ತಪ್ಪು ಮಾಡಿಲ್ಲ ಎಂದರೇ ಹೆದರುವ ಅವಶ್ಯಕತೆ ಇಲ್ಲ. ಲೆಕ್ಕಪತ್ರ ಸರಿಯಾಗಿದ್ದರೇ ಹೆದರಬೇಕಿಲ್ಲ ಎಂದು ತಿಳಿಸಿದರು.cbi-attack-dk-sivakumar-not-fear-minister-jagdish-shettar

ಹಾಗೆಯೇ ಡಿ.ಕೆ ಶಿವಕುಮಾರ್ ತಮ್ಮ ಸಂಪಾದನೆಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲಾ ನೀಡಲಿ. ತಪ್ಪಿಲ್ಲದಿದ್ದರೇ ಆರೋಪದಿಂದ ಮುಕ್ತರಾಗಿ ಹೊರಬರಲಿ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Key words:  cbi-attack -DK Sivakumar – not fear-Minister -Jagdish Shettar.