ಕಾವೇರಿ ನೀರು ಬಿಡಲೇ ಬೇಕೆಂದರೇ ನಾವು ಬಂದ್ ಮಾಡಲು ಸಿದ್ಧ- ವಾಟಾಳ್ ನಾಗರಾಜ್ ಎಚ್ಚರಿಕೆ.

Promotion

ಬೆಂಗಳೂರು,ಸೆಪ್ಟಂಬರ್,21,2023(www.justkannada.in): ತಮಿಳುನಾಡಿಗೆ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡಪರ ಹೋರಾಟಗಾರ  ವಾಟಾಳ್ ನಾಗರಾಜ್, ಕಾವೇರಿ ನೀರು ಬಿಡಲೇ ಬೇಕೆಂದರೇ ನಾವು ಬಂದ್ ಮಾಡಲು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ

ಈ ಕುರಿತು ಮಾತನಾಡಿದ ವಾಟಾಳ್ ನಾಗರಾಜ್,  ಕರ್ನಾಟಕ ದಿಕ್ಕಿಲ್ಲದಂತೆ ಆಗಿದೆ.  ರಾಜ್ಯದ ಎಲ್ಲ ಸಂಸದರು ರಾಜೀನಾಮೆ ಕೊಟ್ಟು ನಿಮ್ಮ ಧೈರ್ಯ ತೋರಿಸಿ.  ಇನ್ನೆರಡು ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಚರ್ಚೆ ಮಾಡುತ್ತವೆ. ಕನ್ನಡಪರ ಸಂಘಟನೆಗಳು ಚರ್ಚೆ ಮಾಡಿ ಹೋರಾಟಕ್ಕೆ ನಿರ್ಧರಿಸುತ್ತವೆ.  ಕಾವೇರಿ ನೀರು ಬಿಡಲೇ ಬೇಕೆಂದರೇ ನಾವು ಬಂದ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಹೋರಾಟಕ್ಕೆ ನಟರು ಬರುತ್ತೇವೆ ಎಂದು ಹೇಳಿದ್ದಾರೆ ನೋಡೋಣ. ನಮ್ಮ ನಾಡಿನ ಪರ, ಕನ್ನಡ ಪರ  ಬರದಿದ್ದರೇ ಏನು ಮಾಡಬೇಕೋ ಮಾಡೋಣ. ಶಾಸಕರು ಮುದ್ದು ಮುದ್ದಾಗಿ ಮಾತನಾಡಲು ವಿಧಾನಸೌಧದಲ್ಲಿ ಬರ್ತಾರೆ. ಅವರೆಲ್ಲಾ ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ. ರಾಜ್ಯ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ನೋಡೋಣ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Key words: caveri water-tamilnadu- Karnataka-protest- Vatal Nagaraj -warns.