ವಂಚನೆ ಯತ್ನ ಪ್ರಕರಣ: ಸುದ್ಧಿಗೋಷ್ಠಿಯಲ್ಲಿ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟ ನಟ ದರ್ಶನ್.

Promotion

ಮೈಸೂರು,ಜುಲೈ,12,2021(www.justkannada.in): ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೇಂಜಿಂಗ್ ಸ್ಟಾರ್ ದರ್ಶನ್  ಸುದ್ದಿಗೋಷ್ಠಿ ನಡೆಸಿ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.jk

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಟ ದರ್ಶನ್,  ಏಪ್ರಿಲ್ 9 ರಂದು ಮೈಸೂರಿನ ತೋಟದಲ್ಲಿದ್ದೆ. 25 ಕೋಟಿ ರೂಗೆ ಶ್ಯೂರಿಟಿ ಹಾಕ್ತೀರ ಎಂದು ಉಮಾಪತಿಗೆ ಜೂನ್ 6 ರಂದು ಕರೆ ಬಂದಿತ್ತು.  ನಿರ್ಮಾಪಕ ಉಮಾಪತಿ ಜೂನ್​ 13ರಂದು ನನಗೆ ಕರೆ ಮಾಡಿದ್ದರು. ಕರೆ ಮಾಡಿ 25 ಕೋಟಿ ಲೋನ್​ ಗೆ ನಾನು ಶ್ಯೂರಿಟಿ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು.

ಹರ್ಷ ನನಗೆ ಹಳೆಯ ಪರಿಚಯ. ಉಮಾಪತಿ ಅರುಣ್ ಕುಮಾರಿಯನ್ನ  ಮನೆಗೆ ಕರೆದುಕೊಂಡು ಬಂದಿದ್ರು. ನಂತರ ಅರುಣ್ ಕುಮಾರಿ ಬಹಳ ಚೆನ್ನಾಗಿಯೇ ಎಲ್ಲವನ್ನು ಹೇಳಿದ್ರು. ಅರುಣಾ ಕುಮಾರಿ ಪ್ರತಿಯೊಂದು ವಿಚಾರವನ್ನ ಸತ್ಯ ಎಂಬಂತೆ ನನ್ನ ಮುಂದೆ ವಿವರಣೆ ನೀಡಿದ್ದರು. ನಾನು ರಾಕೇಶ್​​ ಕುಮಾರ್​ ಗೆ ಕರೆ ಮಾಡಿ ಅರುಣಾ ಕುಮಾರಿ ಜೊತೆ ಮಾತನಾಡುವಂತೆ ಹೇಳಿದೆ. ಆಕೆ ಅವರಿಗೂ ಸಂಪೂರ್ಣ ವಿವರಣೆ ನೀಡಿದರು. ತೋಟ ನನ್ನ ಪತ್ನಿಯ ಹೆಸರಲ್ಲಿ ಇರೋದ್ರಿಂದ ನಾನು ಹೇಗೆ ಶ್ಯೂರಿಟಿ ನೀಡಲು ಸಾಧ್ಯ ಎಂದು ಅರುಣಾ ಕುಮಾರಿಯಲ್ಲಿ ಹೇಳಿದ್ದೆ. ಆದರೆ ಆಕೆ ತಾನು ತೋಟ ನೋಡಲೇಬೇಕೆಂದು ಹೇಳಿದರು. ತೋಟ ವೆರಿಫೈ ಮಾಡಬೇಕು ಎಂದಿದ್ದರು.

ಆಕೆ ಹರ್ಷ, ಪತ್ನಿ ಊರ್ವಶಿ ಹೆಸರನ್ನೂ ಹೇಳಿದ್ದಳು. ಅರುಣಾ ಕುಮಾರಿ ಎಲ್ಲರ ಹೆಸರನ್ನ ಸಾರಾ ಸಾಗಾಟಾಗಿ ಹೇಳಿದ್ದರಿಂದ ನಾನೂ ಮೊದಲು ಆಕೆಯನ್ನ ನಂಬಿದ್ದೆ. ಆಕೆಯ ಜೊತೆ ಇನ್ನಿಬ್ಬರೂ ಹುಡುಗರು ಸಹ ಇದ್ದರು. ರಾಕೇಶ್​ ಹಾಗೂ ಹರ್ಷ ತೋಟಕ್ಕೆ ಬಂದಿದ್ದರು. ಹರ್ಷರನ್ನ ತೋಟದಲ್ಲಿ ನೋಡಿದ ಅರುಣಾ ಕುಮಾರಿ ಶಾಕ್​ ಆಗಿದ್ದರು.

ಈ ಮೊದಲು ಹರ್ಷ ಸಾಲಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದರು ಎಂದು ಹೇಳಿದ್ದ ಅರುಣಾ ಬಳಿಕ ಹರ್ಷ ಯಾರೆಂದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹರ್ಷಾರ ಹಳೆಯ ಫೋಟೋವನ್ನ ಮಾತ್ರ ಅರುಣಾ ಕುಮಾರಿ ಗುರುತಿಸುತ್ತಿದ್ದರು.

ಸಂಪೂರ್ಣ ಘಟನೆ ಗೊಂದಲಮಯವಾಗಿತ್ತು. ಈಕೆ ಧೀರಜ್​ ಪ್ರಸಾದ್​ರಿಂದ ಒತ್ತಡ ಇದೆ. ಧೀರಜ್ ಪ್ರಸಾದ್ ಶ್ರೀನಿವಾಸ್ ಪ್ರಸಾದ್ ಅವರ ಸಂಬಂಧಿ ಎಂದು ನನ್ನ ಬಳಿ ಹೇಳಿದ್ದಳು. ಈಕೆ ಫೇಸ್​ಬುಕ್​ನಲ್ಲಿ ರಾಕೇಶ್​ ಶರ್ಮಾ ಫೋಟೋ ಡೌನ್​ಲೋಡ್​ ಮಾಡಿದ್ದಳು. ಬ್ಯಾಂಕ್​​ನಲ್ಲಿ ವಿಚಾರಿಸಿದ ವೇಳೆ ಈಕೆ ಫೇಕ್​ ಎಂದು ತಿಳಿದಿದೆ.

ಕೂಡಲೇ ನಾವು ಉಮಾಪತಿ ಭೇಟಿ ಮಾಡಲು ಮುಂದಾದೆವು. ಅವರೇ ಅರುಣಾ ಕುಮಾರಿ ಭೇಟಿ ಮಾಡಿಸಿದ್ದರಿಂದ ನಮಗೂ ಸ್ಪಷ್ಟನೆ ಬೇಕಿತ್ತು. ಈ ಪ್ರಕರಣದಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ. ನಾನೇ ಉಮಾಪತಿಗೆ ಪ್ರಕರಣ ಸಂಬಂಧ ದೂರನ್ನ ನೀಡಲು ಹೇಳಿದ್ದೆ. ನಾನು ಆರ್ ಆರ್ ನಗರದಲ್ಲಿ ದೂರು ನೀಡುತ್ತೇನೆ ಎಂದಿದ್ದೆ. ದೂರು ನೀಡಿದ ಬಳಿಕ ಅರುಣಾ ಕುಮಾರಿ ತಾವು ಸತ್ಯ ಹೇಳೋದಾಗಿ ಹೇಳಿದ್ದರು. ಹೀಗಾಗಿ ಸತ್ಯಾಂಶ ಹೇಳಿ ಹೋಗುವಂತೆ ಅರುಣ್ ಕುಮಾರಿಗೆ ತಿಳಿಸಿದವು.  ಬಳಿಕ ಇಷ್ಟೆಲ್ಲಾ ಮಾಡಿದ್ದು ಉಮಾಪತಿ ಎಂದು ಅರುಣ್ ಕುಮಾರಿ ಹೇಳಿದ್ದಾರೆ. ಅಲ್ಲದೇ ಆಕೆ ಈ ಎಲ್ಲಾ ಪ್ರಕರಣಕ್ಕೆ ಉಮಾಪತಿಯೇ ಕಾರಣ ಎಂದು ಆಕೆ ಹೇಳಿದ್ದಾಳೆ . ಸತ್ಯ ಬಾಯಿ ಬಿಟ್ಟರೆ ಸಾಯಿಸಿ ಬಿಡುತ್ತೇನೆ ಎಂದು ಉಮಾಪತಿ ಬೆದರಿಕೆ ಹಾಕಿದ್ದಾರೆ ಎಂದು ಅರುಣ್ ಕುಮಾರಿ ತಿಳಿಸಿದ್ದರು. ಎಂದು ನಟ ದರ್ಶನ್ ಮಾಹಿತಿ ನೀಡಿದರು.

ನಾನು ಉಮಾಪತಿ ವಿರುದ್ಧ ಆರೋಪ ಮಾಡುತ್ತಿಲ್ಲ. ಆದರೆ ಯಾರು ತಪ್ಪು ಮಾಡಿದ್ದಾರೋ ಅವರನ್ನ ಹಿಡಿಯುತ್ತೇವೆ. ಘಟನೆಗೆ ನನಗೂ ಸಂಬಂಧವಿಲ್ಲ ಎಂದು ಉಮಾಪತಿ ಹೇಳಿದ್ದಾರೆ. ಅವರ ಪರಿಚಯ ಇಲ್ಲ ಎಂದಿದ್ದರು ಆದರೆ ಏ 8 ರಂದು ಅರುಣ್ ಕುಮಾರಿ ಜತೆ ಚಾಟ್ ಮಾಡಿದ್ದಾರೆ.. ಚಾಟ್ ಮಾಡಿರುವುದು ಪತ್ತೆಯಾಗಿದೆ ಎಂದು ನಟ ದರ್ಶನ್ ತಿಳಿಸಿದ್ದಾರೆ.

ನಾನು ಈ ಪ್ರಕರಣದಲ್ಲಿ ಯಾರನ್ನೂ ದೂಷಿಸುತ್ತಿಲ್ಲ. ನಾನು ಅರುಣಾ ಕುಮಾರಿ ಹಾಗೂ ಉಮಾಪತಿಯನ್ನೇ ಮುಖಾಮುಖಿ ಮಾಡಿ ನಿಲ್ಲಿಸಿದ್ದೇನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಪ್ಪಿತಸ್ಥರು ಯಾರೆಂದು ತಿಳಿದರೆ ಅವರನ್ನ ಮಾತ್ರ ನಾನು ಸುಮ್ಮನೇ ಬಿಡೋದಿಲ್ಲ ಎಂದು ನಟ ದರ್ಶನ್ ತಿಳಿಸಿದ್ದಾರೆ.

Key words: Case – fraud attempt-Actor Darshan-unraveling -mysore