ದೀಪಿಕಾ ‘ಚಪಾಕ್’ ಬಿಡುಗಡೆಗೆ ಬರಹಗಾರನ ವಿಘ್ನ !

Promotion

ಬೆಂಗಳೂರು, ಡಿಸೆಂಬರ್ 26, 2019 (www.justkannada.in): ದೀಪಿಕಾ ಪಡುಕೋಣೆ ಅಭಿನಯದ ‘ಚಪಾಕ್’ ರಿಲೀಸ್ ಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ, ಬರಹಗಾರ ರಾಕೇಶ್ ಭಾರತಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಆಸಿಡ್ ಸಂತ್ರಸ್ತೆಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಚಪಾಕ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ವಿವಾದವೊಂದು ಶುರುವಾಗಿದೆ.

‘ಬ್ಲಾಕ್ ಡೇ’ ಶೀರ್ಷಿಕೆ ಅಡಿ ತಾವು ಬರೆದ ಕಥೆಯನ್ನು ‘ಚಪಾಕ್’ ಚಿತ್ರತಂಡ ನಕಲು ಮಾಡಿದೆ. ‘ಚಪಾಕ್’ ಸಿನಿಮಾದಲ್ಲಿ ತಮಗೆ ಸೂಕ್ತ ಕ್ರೆಡಿಟ್ ಸಿಗಬೇಕು. ಇಲ್ಲಾಂದ್ರೆ, ಚಿತ್ರ ಬಿಡುಗಡೆ ಆಗಲು ಬಿಡಬಾರದು ಎಂದು ಕೋರಿ ಬರಹಗಾರ ರಾಕೇಶ್ ಭಾರತಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.