ಟ್ಯಾಂಕರ್ ಗೆ ಕಾರು ಡಿಕ್ಕಿ: ಐವರು ದುರ್ಮರಣ.

Promotion

ಚೆನ್ನೈ,ನವೆಂಬರ್,17,2023(www.justkannada.in):  ಟ್ಯಾಂಕರ್ ಗೆ ಕಾರು ಡಿಕ್ಕಿಯಾಗಿ ಐವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯ ಧಾರಾಪುರಂನ ಮನಕಡೌ ಬಳಿ ನಡೆದಿದೆ.

ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದ್ದು, ತಮಿಳುಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣನ್ (78) ಮತ್ತು ಕಲಾರಾಣಿ (50) ಮೃತಪಟ್ಟವರು.

ಪೆಟ್ರೋಲ್ ಟ್ಯಾಂಕರ್ ಕೊಯಮತ್ತೂರು ಜಿಲ್ಲೆಯ ಇರುಗೂರ್‌ನಿಂದ ದ್ರಾಪುರಂ-ಪಳನಿ ರಸ್ತೆಯ ಮಣಕಾಡೌ ಬಳಿ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ನೇರವಾಗಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದವರು ಮದುವೆ ಕಾರ್ಯಕ್ರಮ ಮುಗಿಸಿ ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು  ಹೇಳಲಾಗುತ್ತಿದೆ.

Key words: Car –collides- with- tanker- Five -die