ನಿಂತಿದ್ಧ ಲಾರಿಗೆ ಕಾರು ಡಿಕ್ಕಿ: ಗರ್ಭಿಣಿ ಸೇರಿ 7 ಮಂದಿ ಸಾವು…

Promotion

ಕಲಬುರಗಿ,ಸೆಪ್ಟಂಬರ್,27,2020(www.justkannada.in):  ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಗರ್ಭಿಣಿ ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.jk-logo-justkannada-logo

ಕಲಬುರಗಿ ಜಿಲ್ಲೆಯ ಸಾವಳಗಿ ಬಳಿ ಈ ಘಟನೆ ನಡೆದಿದೆ. ಗರ್ಭಿಣಿ ಇರ್ಫಾನಾ ಬೇಗಂ (25), ರುಬಿಯಾ ಬೇಗಂ (50), ಅಬೇದಾಬಿ ಬೇಗಂ (50), ಜಯಚುನಬಿ (60) ಹಾಗೂ ಮುನೀರ್ (28), ಮಹಮ್ಮದ್ ಅಲಿ (38), ಶೌಕತ್ ಅಲಿ (29) ಮೃತಪಟ್ಟವರು. ಓರ್ವ ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು ಹಾಗೂ ಮೂವರು ಪುರಷರು ಮೃತಪಟ್ಟಿದ್ದಾರೆ.car-collided-lorry-7-deaths-kalburgi

ಮೃತಪಟ್ಟವರೆಲ್ಲರೂ ಆಳಂದ ತಾಲೂಕಿನ ನಿವಾಸಿಗಳಾಗಿದ್ದು, ಗರ್ಭಿಣಿಯನ್ನು ಹೆರಿಗೆಗಾಗಿ ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ  ಸಂಭವಿಸಿದೆ. ಕಲಬುರಗಿ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Car- collided – lorry-7 deaths -kalburgi