ತಂದೆಯ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಹಾಕಿ ಆಟಗಾರ್ತಿ ಸ್ಥಳದಲ್ಲೇ ಸಾವು…

Promotion

ಧಾರವಾಡ, ಮೇ,7,2019(www.justkannada.in):  ತಂದೆ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾದ ಪರಿಣಾಮ ಹಾಕಿ ಆಟಗಾರ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲ್ಲೂಕಿನ  ಮಾದನಭಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಜಾತಾ ಕೆರಳ್ಳಿ(16) ಮೃತಪಟ್ಟ ಹಾಕಿ ಆಟಗಾರ್ತಿ. ಸುಜಾತ 17 ವರ್ಷದೊಳಗಿನ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ಎನ್ನಲಾಗುತ್ತಿದೆ. ಈಕೆ ಮೈಸೂರಿನಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡುತ್ತಿದ್ದು, ರಜೆ ಹಿನ್ನೆಲೆ ಸ್ವಗ್ರಾಮಕ್ಕೆ ತೆರಳಿದ್ದಳು.

ಈ ನಡುವೆ ಇಂದು ತಂದೆ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಇಬ್ಬರಿಗೂ ಡಿಕ್ಕಿಯಾಗಿದೆ. ಈ ಸಮಯದಲ್ಲಿ ಸುಜಾತ ಕೆರಳ್ಳಿ ಸ್ಥಳದಲ್ಲೇ ಸಾವನ್ನಪ್ಪಿದ್ದು ತಂದೆ ಮಲ್ಲಿಕಾರ್ಜುನ ಕೆರಳ್ಳಿ ಅವರಿಗೆ ಗಂಭೀರ ಗಾಯಗಳಾಗಿದೆ. ಮಲ್ಲಿಕಾರ್ಜುನ ಅವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: car -collided – Hockey- player-died -on the spot….