ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಸಂವಿಧಾನ ಜ್ಞಾನ ಹೊಂದಿರುವುದು ಅಗತ್ಯ- ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಎನ್. ರಾಜಶೇಖರ್

ಮೈಸೂರು,ಜನವರಿ,19,2021(www.justkannada.in): ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳು ಸಂವಿಧಾನ ಜ್ಞಾನ ಹೊಂದಿರುವುದು ಅಗತ್ಯ ಎಂದು ಕರ್ನಾಟಕ ಮೂಲದ ಹಾಸನ ಜಿಲ್ಲೆಯ 2007-08ನೇ ಸಾಲಿನ ನಾಗಲ್ಯಾಂಡ್ ಕೇಡರ್‌ ನ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಎನ್. ರಾಜಶೇಖರ್ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸೋಮವಾರ ಆಯೋಜಿಸಿರುವ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ  ಆನ್ ಲೈನ್ ತರಬೇತಿಯಲ್ಲಿ ಮಾತನಾಡಿ, ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಲ್ಲಿ ಸಂವಿಧಾನ ಮತ್ತು ಇತಿಹಾಸ, ಭೂಗೋಳಶಾಸ್ತ್ರ, ಅರ್ಥಶಾಸ, ವಿಜ್ಞಾನ ವಿಷಯಗಳು, ಬ್ಯಾಂಕಿಂಗ್ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಆಲ್‌ ಇಂಡಿಯಾ ರೇಡಿಯೋ, ರಾಜ್ಯಸಭೆ ಮತ್ತು ಲೋಕಸಭೆ ಇವುಗಳ ವಿಶೇಷಾಧಿಕಾರದ ಬಗ್ಗೆ ಪರಿಪೂರ್ಣವಾಗಿ ಅರಿತರಬೇಕು.jk

ದೇಶದ ಪ್ರತಿಯೊಬ್ಬ ನಾಗರಿಕನೂ ನಮ್ಮ ಸಂವಿಧಾನದ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದರೆ ನಮ್ಮ ಹಕ್ಕು ರಕ್ಷಣೆಗೆ ಸಹಕಾರಿಯಾಗುತ್ತದೆ. ಯುಪಿಎಸ್‌ ಸಿ ಮತ್ತು ಕೆಪಿಎಸ್‌ ಸಿ ಸೇರಿದಂತೆ ಯಾವುದೇ ಸಂಸ್ಥೆ ನಡೆಸುವ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಸಂವಿಧಾನ ಅಲ್ಲದ ವಿವಿಧ ಪ್ರಮುಖ ವಿಷಯಗಳ ಕುರಿತು ಪ್ರಶ್ನೆಗಳಿರುತ್ತವೆ. ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಂವಿಧಾನದ ಸ್ಥೂಲ ಪರಿಚಯ ಅಗತ್ಯ ಎಂದು ತಿಳಿಸಿದರು.

ನಮ್ಮ ಸಂವಿಧಾನದ ಪ್ರಸ್ತಾವನೆ ಭಾರತ ಸಂವಿಧಾನದ ಹೃದಯ ಮತ್ತು ಆತ್ಮ ಎಂದು ಕರೆಯಲಾಗುತ್ತದೆ. ಇದು ಒಬ್ಬ ವ್ಯಕ್ತಿಯ ವೈಯಕ್ತಿಕ ಘನತೆ ಕಾಪಾಡುವುದರಿಂದ ಹಿಡಿದು ರಾಷ್ಟ್ರದ ಹಿತಾಸಕ್ತಿ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಕ್ಕಿಂತ ಭಾರತದ ಸಂವಿಧಾನ ಭಿನ್ನ ವಿಶಿಷ್ಟವಾಗಿದೆ ಎಂದು ಪ್ರತಿಪಾದಿಸಿದರು.

ವಬಿನಾರ್‌ನಲ್ಲಿ ಭಾಗವಹಿಸಿ ಮಾತನಾಡಿದ ಕುಲಪತಿ ಡಾ. ಎಸ್ ವಿದ್ಯಾಶಂಕರ್, ಬರೀ ಪದವಿಧರರನ್ನು ಮಾತ್ರ ಉತ್ಪಾದನೆ ಮಾಡುವುದು ನಮ್ಮ ಉದ್ದೇಶವಲ್ಲ, ಅವರಿಗೆ ಉದ್ಯೋಗ ದೂರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ, ವರ್ಚುವಲ್ ವೇದಿಕೆಯಲ್ಲಿ 1800 ಅಭ್ಯರ್ಥಿಗಳು ಭಾಗವಹಿಸಿರುವುದು ಸಂತಸ ಮೂಡಿದೆ ಎಂದರು.

ಕುಲಪತಿ ಡಾ. ವಿದ್ಯಾಶಂಕರ್  ಅವರ ಮಾರ್ಗದರ್ಶನದಲ್ಲಿ  ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ  ಐಎಎಸ್/ಕೆಎಎಸ್  ತರಬೇತಿಯು 60 ದಿನ ತರಬೇತಿ ಕಳೆದ ನವಂಬರ್‌ನಲ್ಲಿ ಆರಂಭವಾಗಿದೆ.

ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ತರಬೇತಿ ಹಾಗೂ ಪರೀಕ್ಷಾರ್ಥಿಗಳಲ್ಲಿ ಸ್ಪೂರ್ತಿ  ತುಂಬಲು ಐಎಎಸ್ ಕೆಎಎಸ್ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತೇಜನ ನೀಡುತ್ತಿದ್ದಾರೆ. ಪ್ರತಿನಿತ್ಯ 1300 ಜನ ರಾಜ್ಯದ ವಿವಿಧ ಜಿಲ್ಲೆಗಳಿಂದ ಆನ್‌ಲೈನ್ ತರಬೇತಿಯ ಸದುಪಯೋಗ ಪಡೆದುಕೊಳ್ಳುತ್ತಿದಾರೆ ಎಂದು ಕರಾಮುವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

Key words: Candidates – write- competitive test -required – possess constitutional -knowledge – Senior IPS officer -DIG N. Rajashekhar