ಮಕ್ಕಳ ವಿರುದ್ಧ ಹಿಂಸೆ ಕೊನೆಗೊಳಿಸಲು ಅಭಿಯಾನ: ಆಯುಷ್ಮಾನ್ ಖುರಾನಾ ಮತ್ತು ಡೇವಿಡ್ ಬೆಕ್ಹಾಮ್ ಅವರ ಸಹಯೋಗ…

Promotion

ಮುಂಬೈ,ಸೆಪ್ಟಂಬರ್,11,2020(www.justkannada.in): ಮಕ್ಕಳ ವಿರುದ್ಧದ ಹಿಂಸೆಯನ್ನು ಅಂತ್ಯಗೊಳಿಸಲು ಪ್ರಾರಂಭಿಸಲಾಗಿರುವ ಮಕ್ಕಳ ಹಕ್ಕುಗಳ ಅಭಿಯಾನಕ್ಕೆ ಯುವಜನರ ನಾಯಕ ಮತ್ತು ಚಿಂತಕ ಆಯುಷ್ಮಾನ್ ಖುರಾನಾ ಅವರು ಬೆಂಬಲಿಸಿದ್ದು ಮಕ್ಕಳ ಹಕ್ಕುಗಳ ಸೆಲೆಬ್ರಿಟಿ ವಕ್ತಾರರಾಗಿ ನೇಮಕವಾಗಿದ್ದಾರೆ.jk-logo-justkannada-logo

ಯುನಿಸೆಫ್ ಇಂಡಿಯಾಗೆ ಯುವಜನರ ನಾಯಕ ಮತ್ತು ಚಿಂತಕ ಆಯುಷ್ಮಾನ್ ಖುರಾನಾ #ಫಾರ್‌ಎವೆರಿಚೈಲ್ಡ್ ಮೂಲಕ ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಮಕ್ಕಳ ವಿರುದ್ಧದ ಹಿಂಸೆಯನ್ನು ಅಂತ್ಯಗೊಳಿಸಲು ಯುನಿಸೆಫ್‌ಗೆ ಬೆಂಬಲಿಸಲಿದ್ದಾರೆ. ಈ ಯೂಥ್ ಐಕಾನ್ ಭಾರತದಲ್ಲಿ ಈ ಉಪಕ್ರಮಕ್ಕೆ ಕೆಲಸ ಮಾಡುತ್ತಾರೆ ಮತ್ತು ಅವರು ಜಾಗತಿಕವಾಗಿ ಈ ಅಭಿಯಾನದಲ್ಲಿ ಸಕ್ರಿಯವಾಗಿರುವ ಡೇವಿಡ್ ಬೆಕ್ಹಾಮ್ ಅವರೊಂದಿಗೆ ಕೈ ಜೋಡಿಸಲಿದ್ದಾರೆ.

ಮಕ್ಕಳ ಹಕ್ಕುಗಳ ಸೆಲೆಬ್ರಿಟಿ ವಕ್ತಾರ ಆಯುಷ್ಮಾನ್ ಖುರಾನಾ ಅವರನ್ನು ಸ್ವಾಗತಿಸಿದ ಭಾರತಕ್ಕೆ, ಯುನಿಸೆಫ್ ಪ್ರತಿನಿಧಿ ಡಾ.ಯಾಸ್ಮಿನ್ ಅಲಿ ಹಕ್, “ನಾನು ಆಯುಷ್ಮಾನ್ ಖುರಾನಾ ಅವರನ್ನು ಯುನಿಸೆಫ್ ಸೆಲೆಬ್ರಿಟಿ ವಕ್ತಾರನಾಗಿ ಸ್ವಾಗತಿಸಲು ಬಹಳ ಸಂತೋಷಿಸುತ್ತೇನೆ. ಅವರು ವಹಿಸುವ ಪ್ರತಿ ಪಾತ್ರಗಳಲ್ಲೂ ಮಿತಿಗಳನ್ನು ಮೀರುತ್ತಾರೆ ಮತ್ತು ಸಂವೇದನೆ, ತೀವ್ರತೆ ಮತ್ತು ಶಕ್ತಿಯುತ ಧ್ವನಿಯನ್ನು ಪ್ರತಿ ಮಗುವಿಗೂ ತರುತ್ತಿದ್ದು ಮಕ್ಕಳ ವಿರುದ್ಧ ಹಿಂಸೆಯನ್ನು ಕೊನೆಗೊಳಿಸಲು ವಿಶೇಷ ಗಮನ ನೀಡುತ್ತಾರೆ. ಆಯುಷ್ಮಾನ್ ಅವರ ಬೆಂಬಲವು,  ಈ ಪ್ರಮುಖ ಸಮಸ್ಯೆ ಅದರಲ್ಲಿಯೂ ಈಗ ಕೋವಿಡ್-19ರಿಂದ ವಿಸ್ತರಿಸಿದ ಲಾಕ್‌ಡೌನ್‌ನಿಂದ ಹೆಚ್ಚಾಗಿರುವ ಮಕ್ಕಳ ವಿರುದ್ಧ ಹಿಂಸೆ ಮತ್ತು ದುರುಪಯೋಗ ಹಾಗೂ ಸಾಂಕ್ರಾಮಿಕದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಸಂದರ್ಭದಲ್ಲಿ ಈ ಪ್ರಮುಖ ಸಮಸ್ಯೆ ಕುರಿತು ಅರಿವನ್ನು ಹೆಚ್ಚಿಸಲಿದೆ ಎಂದರು.campaign-end-violence-against-children-ayushmann-khurana-david-beckham

ಈ ಕುರಿತು ಪ್ರತಿಕ್ರಿಯಿಸಿರುವ ನಟ ಆಯುಷ್ಮಾನ್ ಖುರಾನಾ, “ಯುನಿಸೆಫ್‌ನೊಂದಿಗೆ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ಸಹಯೋಗಕ್ಕೆ ನನಗೆ ಬಜಳ ಸಂತೋಷವಾಗಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಅತ್ಯುತ್ತಮ ಪ್ರಾರಂಭ ಅಗತ್ಯ ಎಂದು ನಾನು ನಂಬುತ್ತೇನೆ. ನನ್ನ ಮಕ್ಕಳು ನಮ್ಮ ಮನೆಯ ಸುರಕ್ಷತೆಯಲ್ಲಿ ಮತ್ತು ಸಂತೋಷದಲ್ಲಿ ಆಡುತ್ತಿರುವುದನ್ನು ನೋಡುವಾಗ ಮತ್ತು ಸುರಕ್ಷಿತ ಬಾಲ್ಯವನ್ನು ಕಾಣದ ಮತ್ತು ಮನೆಯಲ್ಲಿ ಅಥವಾ ಹೊರಗಡೆ ಹಿಂಸೆಯೊAದಿಗೆ ಬೆಳೆಯುವ ಎಲ್ಲ ಮಕ್ಕಳ ಕುರಿತು ಯೋಚಿಸುತ್ತೇನೆ. ಯುನಿಸೆಫ್‌ನೊಂದಿಗೆ ನಾನು ಅತ್ಯಂತ ದುರ್ಬಲ ಮಕ್ಕಳ ಹಕ್ಕುಗಳಿಗೆ ಬೆಂಬಲಿಸಲು ಎದುರು ನೋಡುತ್ತಿದ್ದೇನೆ, ಇದರಿಂದ ಅವರು ಸಂತೋಷಕರ, ಆರೋಗ್ಯಕರ, ಸುಶಿಕ್ಷಿತ ನಾಗರಿಕರಾಗಿ ಹಿಂಸೆಯಿಂದ ಮುಕ್ತ ವಾತಾವರಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ” ಎಂದರು.

Key words: Campaign – end- violence -against –children-Ayushmann Khurana- David Beckham.