ಇನ್ಮುಂದೆ ಡಿ.ಕೆ ಶಿವಕುಮಾರ್ ರನ್ನ ಏಸು ಕುಮಾರ ಎಂದು ಕರೆಯಬೇಕು- ಶಾಸಕ ಎಂ.ಪಿ ರೇಣುಕಾಚಾರ್ಯ ವ್ಯಂಗ್ಯ….

Promotion

ದಾವಣಗೆರೆ, ಡಿ,28,2019(www.justkannada.in):   ಕನಕಪುರದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿರುವ  ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಹೊಸ ಹೆಸರು ನಾಮಕರಣ ಮಾಡಿದ್ದಾರೆ.

ಡಿಕೆ.ಶಿವಕುಮಾರ್ ಗೆ ಇನ್ಮುಂದೆ ಏಸುಕುಮಾರ್ ಅಂತಾ ಕರೆಯಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ದಾವಣಗೆರೆಯ ಹೊನ್ನಾಳಿಯಲ್ಲಿ ಇಂದು ಮಾತನಾಡಿದ ಶಾಸಕ ರೇಣುಕಾಚಾರ್ಯ, ಶಿವಕುಮಾರ್ ಹೆಸರಿನಲ್ಲಿಯೇ ಶಿವ ಮತ್ತು ಕುಮಾರ ಇದೆ. ಹೀಗಾಗಿ  ‘ಇನ್ನು ಮುಂದೆ ಡಿ.ಕೆ.ಶಿವಕುಮಾರ್ ಅನ್ನು ಇನ್ನುಮುಂದೆ ‘ಏಸುಕುಮಾರ’ ಎಂದು ಕರೆಯಬೇಕು ಎಂದರು.

ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಸತತವಾಗಿ ಟೀಕಿಸುತ್ತಿದ್ದಾರೆ, ಈಶ್ವರಪ್ಪ, ಅನಂತ್‌ಕುಮಾರ್ ಹೆಗಡೆ, ಬಿ.ವೈ.ವಿಜಯೇಂದ್ರ, ಪ್ರತಾಪ್ ಸಿಂಹ ಸೇರಿದಂತೆ ಇನ್ನೂ ಹಲವು ಬಿಜೆಪಿ ನಾಯಕರು  ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.

Key words: called- DK Sivakumar – Esau Kumara-MLA-MP Renukacharya