ಸಚಿವ ಸಂಪುಟ ಪುನರ್ ರಚನೆ ವಿಚಾರ: ಶಾಸಕ ರಾಮದಾಸ್ ಪ್ರತಿಕ್ರಿಯಿಸಿದ್ದು ಹೀಗೆ…

Promotion

ಮೈಸೂರು,ಆ,1,2020(www.justkannada.in):  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರ ಸದ್ಧು ಮಾಡುತ್ತಿದ್ದು ಈ ನಡುವೆ ಆಗಸ್ಟ್ ತಿಂಗಳಲ್ಲೇ ಈ ಪ್ರಕ್ರಿಯೆ ನಡೆಯಲಿದೆ ಎನ್ನಲಾಗುತ್ತಿದೆ.ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಎಸ್.ಎ ರಾಮದಾಸ್,  ನನ್ನ ಮುಂದೆ ಇರೋದು ಕೋವೀಡ್-19 ಒಂದೇ ನಾನು ಸಚಿವ ಸ್ಥಾನಮಾನದ ವಿಚಾರವಾಗಿ ಚಿಂತನೆಯೂ ಕೂಡ ಮಾಡಿಲ್ಲ ಎಂದಿದ್ದಾರೆ.jk-logo-justkannada-logo

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಸಚಿವ ಸಂಪುಟ ಪುನರ್ ರಚನೆ ವಿಚಾರ, ಇಲ್ಲಿಯವರೆಗೆ ನಾನು ಯಾರನ್ನು ಕೂಡ ಭೇಟಿಯಾಗಿಲ್ಲ. ಪಕ್ಷ ನನಗೆ ಎಲ್ಲವನ್ನೂ‌ ಕೊಟ್ಟಿದೆ. ಎಲ್ಲವೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.cabinet-restructure-mla-sa-ramdas-reaction-mysore

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, ಇದು ಕೇವಲ ಊಹಾಪೋಹ. ಯಡಿಯೂರಪ್ಪ ನಾಯಕತ್ವವನ್ನ ನಾವೆಲ್ಲರೂ ಮೆಚ್ಚಿ ಆಗಿದೆ. ಬದಲಾವಣೆ ಖಂಡಿತಾ ಸಾಧ್ಯವಿಲ್ಲ. ಅವರು ನಮ್ಮ ತಂದೆ ಸಮಾನ. ನಾವೆಲ್ಲರೂ ಅವರ ಮಕ್ಕಳು. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿತ್ತಾರೆ ಎಂದು ಹೇಳಿದರು.

Key words: Cabinet- restructure-MLA SA  Ramdas –reaction- mysore