ಸಂಪುಟ ವಿಸ್ತರಣೆ: ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸಬರಿಗೂ ಅವಕಾಶ  ನೀಡಲಿ- ಸಚಿವ ಸತೀಶ್ ಜಾರಕಿಹೊಳಿ.

Promotion

ಬೆಂಗಳೂರು,ಮೇ,26,2023(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಸರತ್ತು ನಡೆಸುತ್ತಿದ್ದು ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಈ ನಡುವೆ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸಬರಿಗೂ ಅವಕಾಶ ನೀಡಬೇಕು ಎಂದು ಸಚಿವ ಸತೀಶ್​ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ,  ನಾಳೆ ಬೆಳಗ್ಗೆ 11:30ರ ವೇಳೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತದೆ. ಯಾರಿಗೆ ಸಚಿವ ಸ್ಥಾನ ಎಂಬುದು ಪಟ್ಟಿ ಬಿಡಗಡೆ ಬಳಿಕ ಗೊತ್ತಾಗುತ್ತದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸಬರಿಗೂ ಅವಕಾಶ ನೀಡಬೇಕು. ಕನಿಷ್ಠ 10 ಹೊಸಬರಿಗೆ ಅವಕಾಶ ನೀಡಬೇಕು ಅಂತ ಹೇಳಿದ್ದೇನೆ.

ಅದೇ ರೀತಿ ಈ ಬಾರಿ ಹೊಸಬರಿಗೂ ಅವಕಾಶ ನೀಡುತ್ತಿದ್ದಾರೆ. 1-2 ತಿಂಗಳಿನಲ್ಲಿ ನಿಗಮ ಮಂಡಳಿಗಳ ಸ್ಥಾನ ಸಹ ಭರ್ತಿ ಆಗುತ್ತೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Key words: cabinet-expansion-minister-Sathish jarkiholi