ನಾಳೆ ಸಚಿವರ ಪ್ರಮಾಣ ವಚನ ಹಿನ್ನೆಲೆ: ಬೆಂಗಳೂರಿಗೆ ಬರುವಂತೆ ಬಿಜೆಪಿ ನಾಯಕರಿಗೆ ಸೂಚನೆ….

Promotion

ಬೆಂಗಳೂರು,ಆ,19,2019(www.justkannada.in):  ನಾಳೆ ಸಚಿವ ಸಂಪುಟ ರಚನೆಯಾಗಲಿದ್ದು ನೂತನ ಸಚಿವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಬೆಂಗಳೂರಿಗೆ ಆಗಮಿಸುವಂತೆ ಬಿಜೆಪಿ ನಾಯಕರಿಗೆ ರಾಜ್ಯ ಬಿಜೆಪಿ ಕಚೇರಿಯಿಂದ ಬುಲಾವ್ ನೀಡಲಾಗಿದೆ.

ನಾಳೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವಿದೆ. ರಾಜ್ಯಪಾಲರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಮತ್ತು ಕೇಂದ್ರ ಸಚಿವರು ಬೆಂಗಳೂರಿಗೆ ಆಗಮಿಸುವಂತೆ ಬಿಜೆಪಿ ಕಚೇರಿ ಸೂಚನೆ ನೀಡಿದೆ.

Key words: cabinat-structure-  – BJP leaders – come -Bangalore.