ಸಿಎಎ ಮತ್ತು ಎನ್ ಆರ್ ಸಿ ವಿಚಾರದಲ್ಲಿ ಮೋದಿ ಅಮಿತ್ ಶಾರಿಂದ ಸುಳ್ಳು: ಜೆಎನ್ ಯು ಮೇಲಿನ ದಾಳಿ ಸರ್ಕಾರದ ಪ್ರಾಯೋಜಿತ ದಾಳಿ- ಸಿದ್ಧರಾಮಯ್ಯ ಆರೋಪ…

Promotion

ಬೆಂಗಳೂರು,ಜ,8,2020(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ವಿಚಾರದಲ್ಲಿ ಮೋದಿ ಮತ್ತು ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ,  ಪೌರತ್ವ ಕಾಯ್ದೆ ಎನ್ ಆರ್ ಸಿ ವಿಚಾರದಲ್ಲಿ ಪ್ರಧಾನಿ ಮೋದಿ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಒಂದೊಂದು ವೇದಿಕೆಉಯಲ್ಲಿ ಒಂದೊಂದು ರೀತಿ ಹೇಳುತ್ತಿದ್ದಾರೆ.  ಯಾರು ಹೇಳುತ್ತಿರುವುದು ಸತ್ಯ ಅನ್ನೋದನ್ನ ಅವರೇ ಹೇಳಬೇಕು ಎಂದು ಕಿಡಿಕಾರಿದರು.

ಹಾಗೆಯೇ  ಪೌರತ್ವ ಕಾಯ್ದೆ ಎನ್ ಆರ್ ಸಿ ವಿಚಾರದಲ್ಲಿ ಹಿಂಸಾಚಾರ. ಹಿಂಸಾಚಾರದಲ್ಲಿ ಕೇವಲ ಮುಸ್ಲೀಂರಷ್ಟೆ ಮೃತಪಟ್ಟಿಲ್ಲ. ಹಿಂದೂಗಳೂ ಮೃತಪಟ್ಟಿದ್ದಾರೆ. ನನಗೆ ನನ್ನ ಹುಟ್ಟಿದ ದಿನಾಂಕವೇ ಗೊತ್ತಿಲ್ಲ. ನನ್ನ ಜನ್ಮ ದಿನಾಂಕ ಬರೆಸಿದ್ದು ಶಾಲೆಯ ಟೀಚರ್. ನಮ್ಮ ಅಪ್ಪ ಅವ್ವನ ದಿನಾಂಕ ಎಲ್ಲಿ ತರಲಿ ಎಂದು ಲೇವಡಿ ಮಾಡಿದರು.

ಇದೇ ವೇಳೆ ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ದೆಹಲಿಯ ಜೆಎನ್ ಯು ದಾಳಿ ಸರ್ಕಾರದ ಪ್ರಾಯೋಜಿತ ದಾಳಿ. ಏಟು ತಿಂದವರ ಮೇಲೆಯೇ ಎಫ್ ಐಆರ್ ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: CAA –NRC- issue-attack – JNU – government-formercm- Siddaramaiah