ಹುಬ್ಬಳ್ಳಿಯಲ್ಲಿ ಸಿಎಎ ಪರ ಜನ ಜಾಗೃತಿ ಸಮಾವೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋ ಬ್ಯಾಕ್ ಎಂದು ಪ್ರತಿಭಟನೆ ಮಾಡುತ್ತಿದ್ದವರ ಬಂಧನ…

Promotion

ಹುಬ್ಬಳ್ಳಿ,ಜ,18,2020(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಹುಬ್ಬಳ್ಳಿಗೆ ಆಗಮಿಸುವ ಹಿನ್ನೆಲೆ, ಗೋ ಬ್ಯಾಕ್ ಅಮಿತ್ ಶಾ ಎಂದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಸಿಎಎ ಪರ ಜನ ಜಾಗೃತಿ ಸಮಾವೇಶ ಆಯೋಜಿಸಲಾಗಿದ್ದು  ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.  ಇದಕ್ಕೂ ಮುನ್ನ ಅಮಿತ್ ಶಾ ಹುಬ್ಬಳ್ಳಿ ಭೇಟಿಯನ್ನ ಖಂಡಿಸಿರುವ ಪ್ರತಿಭಟನಾಕಾರರು ಗೋಬ್ಯಾಕ್ ಅಮಿತ್ ಶಾ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಅಮಿತ್ ಶಾ ಆಗಮಿಸುವ ಹಿನ್ನೆಲೆ,  10ಕ್ಕೂ ಹೆಚ್ಚು ಎಸ್ ಡಿಪಿಐ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಗೋಬ್ಯಾಕ್ ಅಮಿತ್ ಶಾ, ನೋ ಸಿಎಎ, ನೋ ಎನ್ ಆರ್ ಸಿ ಎಂದು ಕಪ್ಪು ಬಲೂನ್ ನನ್ನ ಹಾರಿ ಬಿಡಲಾಗಿದೆ.

Key words: CAA -awareness conference – Hubli-Home Minister -Amit Shah-go back-protest- arrest