Wednesday, October 7, 2026

BDA Apartments

immense respect BDA JK_Adv BDA Adv
Home Front Page “ಸಿ.ಪಿ.ಯೋಗೇಶ್ವರ್ ಗೆ ಮತಿ ಭ್ರಮಣೆಯಾಗಿದೆ” : ಶಾಸಕ ಸಾ.ರಾ.ಮಹೇಶ್ ಟ್ವೀಟ್

“ಸಿ.ಪಿ.ಯೋಗೇಶ್ವರ್ ಗೆ ಮತಿ ಭ್ರಮಣೆಯಾಗಿದೆ” : ಶಾಸಕ ಸಾ.ರಾ.ಮಹೇಶ್ ಟ್ವೀಟ್

ಮೈಸೂರು,ಫೆಬ್ರವರಿ,28,2021(www.justkannada.in) : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಚನ್ನಪಟ್ಟಣದಲ್ಲಿ ‘ಸರ್ವಪಕ್ಷ ಸದಸ್ಯ’ ಸಿ.ಪಿ.ಯೋಗೇಶ್ವರ್ ಬೆಂಬಲಿತ ಅಭ್ಯರ್ಥಿಗಳು ಹೇಳಹೆಸರಿಲ್ಲದೇ ಸೋತಿದ್ದಾರೆ. ಜೆಡಿಎಸ್‌ 80% ಗೆದ್ದಿದೆ. ದಿನೇ ದಿನೇ ಚನ್ನಪಟ್ಟಣ ಕ್ಷೇತ್ರ ದೂರವಾಗುತ್ತಿರುವುದು ನೋಡಲಾಗದೇ ಕ್ಷೇತ್ರ ಕಳೆದುಹೋಗಿರುವ ನೋವು ತಡೆಯಲಾಗದೇ ಅವರಿಗೆ ಮತಿ ಭ್ರಮಣೆಯಾಗಿದೆ. ಅದಕ್ಕೇ ಉರಿ ಮಾತು ಆಡುತ್ತಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

jk

ಯೋಗೇಶ್ವರ್ ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ

ಚನ್ನಪಟ್ಟಣದ ಚಕ್ಕೆರೆ ‘ಸರ್ವಪಕ್ಷ ಸದಸ್ಯ’ ಯೋಗೇಶ್ವರ್ ಹುಟ್ಟೂರು. ಯಾವುದೇ ನಾಯಕನಿಗೆ ಹುಟ್ಟೂರಿನಲ್ಲಾದರೂ ಮರ್ಯಾದೆ ಇರುತ್ತದೆ. ಆದರೆ, ಯೋಗೇಶ್ವರ್ ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಮೊನ್ನೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಇಡೀ ಚಕ್ಕರೆ ಗ್ರಾಮ ಪಂಚಾಯಿತಿ ಜೆಡಿಎಸ್‌ ಬೆಂಬಲಿಸಿದೆ. ಈ ನೋವು ಆವರನ್ನು ಕಾಡುತ್ತಿರಬಹುದು ಎಂದು ಟೀಕಿಸಿದ್ದಾರೆ.

C.P.Yogeshwar,wist,Rotation,Legislator,Sa.Ra.Mahesh,Tweet

ಸಿ.ಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಮಂತ್ರಿ ಮಾಡಿದೆ

ಹುಟ್ಟೂರಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಎಚ್‌ಡಿಕೆಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್ ಮಾತು ವಾಸ್ತವವೇ? ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ.

C.P.Yogeshwar,wist,Rotation,Legislator,Sa.Ra.Mahesh,Tweet

ಸಿ.ಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಲಿ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : C.P.Yogeshwar-wist-Rotation-Legislator-Sa.Ra.Mahesh-Tweet