ಜಾತಿ ರಾಜಕಾರಣ ಮಾಡುವವರಿಗೆ ಉಪಚುನಾವಣೆ ಒಳ್ಳೆಯ ಪಾಠ : ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು,ನವೆಂಬರ್,11,2020(www.justkannada.in) : ಬೆಂಗಳೂರಿನಲ್ಲಿ ಜಾತಿ ರಾಜಕಾರಣ ಮಾಡುವವರಿಗೆ ಈ ಉಪಚುನಾವಣೆ ದೊಡ್ಡ ಪಾಠ. ಪ್ರಜಾಪ್ರಭುತ್ವದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಶಿರಾ ಹಾಗೂ ಆರ್.ಆರ್.ನಗರ ಫಲಿತಾಂಶ ತಕ್ಕ ಉದಾಹರಣೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.kannada-journalist-media-fourth-estate-under-loss

ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಯಡಿಯೂರಪ್ಪ ನೇತೃತ್ವದ ಸರ್ಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು ಈ ಉಪಚುನಾವಣೆಯಲ್ಲಿ ಗೆಲುವು ತಂದಿದೆ. ಮತದಾರ ಅಭಿವೃದ್ಧಿಯನ್ನು ಕೈ ಹಿಡಿಯುತ್ತಾನೆ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದರು.

ಬೆಳೆ ವಿಮೆ 2019-20ರವರೆಗೆ  ಬಿಡುಗಡೆಯಾಗಿದೆ. ಕೆಲವು ಕಡೆ ಅಕೌಂಟ್ ನಂಬರ್ ತಾಳೆಯಾಗದೆ ಮಿಸ್ ಮ್ಯಾಚಿಂಗ್ ತಾಂತ್ರಿಕಕಾರಣದಿಂದ ವಿಳಂಬವಾಗಿದೆ. ಇನ್ನು ಕೆಲವು ದಿನಗಳಲ್ಲಿಯೇ 2015-16 ರಿಂದ ಸಂಪೂರ್ಣವಾಗಿ ಎಲ್ಲವೂ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವರು ಹೇಳಿದರು.

ಕೃಷಿ ವಿವಿ ಬಾಕಿಯಿರುವ ಹುದ್ದೆಗಳನ್ನು ಸದ್ಯದಲ್ಲಿಯೇ ತುಂಬಲು ಕ್ರಮ

ಆರ್ಥಿಕ ಮಟ್ಟ ಸುಧಾರಿಸಿದ ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಕಿ ಇರುವ ಹುದ್ದೆಗಳನ್ನು ಸದ್ಯದಲ್ಲಿಯೇ ತುಂಬಲು ಕ್ರಮಕೈಗೊಳ್ಳಲಾಗುವುದೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿ.ಸಿ.ಪಾಟೀಲ್ ಉತ್ತರಿಸಿದರು.

 by-election-good-lesson-caste-politicians-Minister B.C.Patil

key words : by-election-good-lesson-caste-politicians-Minister B.C.Patil