ಹುಲಿಯನ್ನ ಹಿಡಿದು ಬೋನಿಗೆ ಹಾಕಿದ್ರೂ ಅದು ಹುಲ್ಲು ತಿನ್ನಲ್ಲ, ಬೇಟೆ ಆಡೋದನ್ನೂ ಮರೆಯಲ್ಲ- ಬಿವೈ ವಿಜಯೇಂದ್ರ ಹೀಗಂದಿದ್ದೇಕೆ..?

Promotion

ಹಾಸನ,ಮೇ,28,2022(www.justkannada.in):  ಹುಲಿಯನ್ನ ಹಿಡಿದು ಬೋನಿಗೆ ಹಾಕಿದ್ರೆ ಅದು ಹುಲ್ಲು ತಿನ್ನಲ್ಲ ಬೇಟೆ ಆಡೋದನ್ನೂ ಮರೆಯಲ್ಲ ಎಂದು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಅವರ ಶಕ್ತಿ ಇನ್ನೂ ಕುಂದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಪರೋಕ್ಷವಾಗಿ ನುಡಿದರು.

ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ್ಯ ಬಿ.ವೈ.ವಿಜಯೇಂದ್ರ, ಬಿಎಸ್ ವೈ ದೊಡ್ಡ ನಾಯಕನಾಗಿ ಬೆಳೆದು ಬಿಡ್ತಾನೆ ಅಂತಾ ಕಾರಿಗೆ ಕಲ್ಲು ಹೊಡೆದರು ಎಷ್ಟೇ ನೋವನ್ನು ತಿಂದರೂ ಕಲ್ಲು ಗಟ್ಟಿ ಮಾಡಿಕೊಂಡರು. . ಎಲ್ಲಾ ನೋವನ್ನು ತಡೆದು ಗಟ್ಟಿಯಾಗಿ ನಿಂತರು. ಜನರ ಆಶೀರ್ವಾದದಿಂದ ನಾಲ್ಕು ಬಾರಿ ಸಿಎಂ ಆದರು. ಬಿಎಸ್ ವೈ ಹೋರಾಟ ಸಣ್ಣ ವಯಸ್ಸಿನಿಂದಲೂ ನೋಡಿದ್ದೇನೆ  ಶಿಕಾರಿಪುರದಂತೆ ಅಭಿವೃದ್ದಿಯಾದ  ತಾಲ್ಲೂಕು ಯಾವುದು ಇಲ್ಲ ಎಂದು ಬಿಎಸ್ ಯಡಿಯೂರಪ್ಪ ಅವರನ್ನ ಗುಣಗಾನ ಮಾಡಿದರು.

ಕಾಡಿನಲ್ಲಿ ಬೇಟೆಯಾಡುವ ಹುಲಿಯನ್ನ ಹಿಡಿದು ಬೋನಿಗೆ ಹಾಕಿದರೇ ಅದು ಹುಲ್ಲು ತಿನ್ನಲ್ಲ. ಜತೆಗೆ ಬೇಟೆ ಆಡೋದನ್ನೂ ಮರೆಯಲ್ಲ ಎಂದರು. ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ ಎನ್ನುತ್ತಲೇ ಮುಂಬರುವ ವಿಧಾನಸಭಾ ಚುನಾವನೆಯಲ್ಲಿ ಸ್ಪರ್ಧಿಸಲು ಸಿದ್ಧವಿದ್ದೇನೆ. ಪಕ್ಷದ ನಾಯಕರು ತೀರ್ಮಾನಿಸಬೇಕು, ಒಂದು ವೇಳೆ ಟಿಕೆಟ್ ನೀಡದಿದ್ದರೂ ಪಕ್ಷಕ್ಕಾಗಿ ದುಡಿಯುವೆ ಎಂದು ತಿಳಿಸಿದರು.

Key words: BY Vijayendra- Praise-BS yeddyurappa