ವಾರ್ಡ್ ನಂ.36ರ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಘೋಷಣೆ.

Promotion

ಮೈಸೂರು,ಆಗಸ್ಟ್,19,2021(www.justkannada.in): ಮೈಸೂರು ಮಹಾನಗರ ಪಾಲಿಕೆ  ವಾರ್ಡ್ ನಂ.36ರ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಪಾಲಿಕೆ ಸದಸ್ಯೆ ರಜಿನಿ ಅಣ್ಣಯ್ಯಗೆ ಟಿಕೆಟ್ ನೀಡಲಾಗಿದೆ.

ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಜಿನಿ ಅಣ್ಣಯ್ಯಗೆ ಬಿ ಫಾರಂ ವಿತರಣೆ ಮಾಡಿದ್ದಾರೆ. ರಜಿನಿ ಅಣ್ಣಯ್ಯರನ್ನು ಗೆಲ್ಲಿಸಿ ಎಂದು ಸ್ಥಳೀಯ ಮುಖಂಡರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕಳೆದ ಬಾರಿ ಕಡಿಮೆ ಅಂತರದಲ್ಲಿ  ರಜಿನಿ ಅಣ್ಣಯ್ಯಸೋಲನುಭವಿಸಿದ್ದರು. ಈ ಬಾರಿ ಹೆಚ್ಚಿನ ಮತಗಳಲ್ಲಿ ಗೆಲ್ಲುವಂತೆ ಪ್ರಚಾರ ಮಾಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಆ.23ರಂದು ನಾಮಪತ್ರ ಸಲ್ಲಿಸಲಿರುವ ರಜನಿ ಅಣ್ಣಯ್ಯ.

key words: By-election – Ward No.36-Congress- ticket -announcement.