ಬೈ ಎಲೆಕ್ಷನ್ ಫಲಿತಾಂಶ: 11 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ…

Promotion

ಬೆಂಗಳೂರು,ಡಿ,9,2019(www.justkannada.in):  ಡಿಸೆಂಬರ್ 5 ರಂದು ನಡೆದ ರಾಜ್ಯದ 15 ವಿಧಾನಸಭೆಯ ಕ್ಷೇತ್ರಗಳ ಉಪಚುನಾವನೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು  15 ಕ್ಷೇತ್ರಗಳಲ್ಲಿ ಬಿಜೆಪಿ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್ 2 ಮತ್ತು ಜೆಡಿಎಸ್  1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಮತ್ತು ಶಿವಾಜಿನಗರದಲ್ಲಿ ಕೈ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ಮುನ್ನಡೆ ಸಾಧಿಸಿದ್ದಾರೆ. ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮುನ್ನಡೆ ಸಾಧಿಸಿದ್ದಾರೆ.

ಹಾಗೆಯೇ ಉಳಿದ 11 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್, ರಾಣಿಬೆನ್ನೂರಿನಲ್ಲಿ ಅರುಣ್ ಕುಮಾರ್, ಕಾಗವಾಡ ಶ್ರೀಮಂತಪಾಟೀಲ್ , ಗೋಕಾಕ್ ರಮೇಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರದಲ್ಲಿ ಸುಧಾಕರ್, ಅಥಣಿಯಲ್ಲಿ ಮಹೇಶ್ ಕುಮುಟಳ್ಳಿ ಮಹಾಲಕ್ಷ್ಮೀ ಲೇಔಟ್ ನಲ್ಲಿ ಗೋಪಾಲಯ್ಯ, ವಿಜಯನಗರದಲ್ಲಿ ಆನಂದ್ ಸಿಂಗ್ ಸೇರಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

Key words: By-election-result- Lead -BJP – 11 constituencies.