ತಿ.ನರಸೀಪುರ ಠಾಣೆಯಲ್ಲಿ ಗುಂಡು ನಾಪತ್ತೆ ಪ್ರಕರಣ: ಮುಖ್ಯಪೇದೆ ನ್ಯಾಯಾಂಗ ವಶಕ್ಕೆ

Promotion

ಮೈಸೂರು, ಜೂನ್ 13, 2020 (www.justkannada.in): ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಮುಖ್ಯ ಪೇದೆ ಕೃಷ್ಣೇಗೌಡ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಬಂಧಿತ ಮುಖ್ಯಪೇದೆಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಜತೆಗೆ ಇವರನ್ನು ಅಮಾನತುಗೊಳಿಸಲಾಗಿತ್ತು.

ಇದರಿಂದ ಅವಮಾನಿತರಾಗಿ ಕಪಿಲಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದರು. ಬಳಿಕ ಅವರನ್ನು ಬಂಧಿಸಲಾಗಿತ್ತು.