‘ಬಿಟಿಎಸ್-2020’ ದಲ್ಲಿ ‘ಆತ್ಮನಿರ್ಭರ ಭಾರತ ಚರ್ಚೆ: ಅಂತಾರಾಷ್ಟ್ರೀಯ ಗುಣಮಟ್ಟದಲ್ಲೇ ದೇಶೀಯ ಡಯಾಗ್ನಾಸ್ಟಿಕ್ ಉತ್ಪನ್ನಗಳ ನಿರ್ಮಾಣದ ಬಗ್ಗೆ ಮೆಚ್ಚುಗೆ..

kannada t-shirts

ಬೆಂಗಳೂರು,ನವೆಂಬರ್,20,2020(www.justkannada.in):  ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಆತ್ಮ ನಿರ್ಭರ ಭಾರತದ ಕನಸು ಸಾಕಾರಗೊಳಿಸುವತ್ತ ಹೆಜ್ಜೆ ಇಡಲಾಗುತ್ತಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದಲ್ಲೇ ದೇಶೀಯವಾಗಿ ಡಯಾಗ್ನಾಸ್ಟಿಕ್ ಉತ್ಪನ್ನಗಳು ನಿರ್ಮಾಣಗೊಳ್ಳುತ್ತಿವೆ ಎಂದು ಕೋವಿಡ್ -19 ಸ್ಕೇಲ್ ಅಪ್ ಪ್ರೋಗ್ರಾಂ, ಸಿ-ಕ್ಯಾಂಪ್‌‌ ನ ಸಿಒಒ  ಲಲಿತ್ ಕಿಶೋರ್ ಹೇಳಿದರು.kannada-journalist-media-fourth-estate-under-loss

ಬೆಂಗಳೂರು ಟೆಕ್ ಶೃಂಗಸಭೆ-2020ರ ಮೊದಲ ದಿನವಾದ ಗುರುವಾರ ‘ಆತ್ಮನಿರ್ಭರ ಭಾರತ- ರಾಷ್ಟ್ರೀಯ ಜೀವವೈದ್ಯಕೀಯ ಸಂಪನ್ಮೂಲ ದೇಶೀಕರಣ ಒಕ್ಕೂಟ (ಎನ್‌ಬಿಆರ್‌ಐಸಿ)’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾನ ಮನಸ್ಕರನ್ನು ಬೆಸೆದ ಇಂಡೆಕ್ಸ್

ಇಂಡೆಕ್ಸ್ (ಇಂಡೀಜಿನೇಶನ್ ಆಫ್ ಡಯಗ್ನೋಸ್ಟಿಕ್ಸ್) ಪ್ರೋಗ್ರಾಮ್‌ನ ನೇತೃತ್ವ ವಹಿಸಿರುವ ಲಲಿತ್ ಕಿಶೋರ್,  ಡಯಾಗ್ನಾಸ್ಟಿಕ್ ಕ್ಷೇತ್ರದಲ್ಲಿ ದೇಶೀಕರಣ ಸಾಧಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ವ್ಯಕ್ತಿಗಳನ್ನು ಸಂಘಟಿಸುವ ಉದ್ದೇಶದಿಂದ ಇಂಡೆಕ್ಸ್ ರಚಿಸಲಾಯಿತು; ಇದರ ಅಡಿಯಲ್ಲಿ ಮೊದಲ ಹಂತವಾಗಿ ಆರ್‌ಟಿಪಿಸಿಆರ್ ಕಿಟ್‌ಗಳನ್ನು ಸಂಪೂರ್ಣವಾಗಿ ದೇಶೀಯವಾಗಿಸಲಾಗಿದೆ; ಬಿಡಿ ಭಾಗಗಳನ್ನು ಉತ್ಪಾದಿಸುವ ಬೇರೆ ಬೇರೆ ಕಂಪನಿಗಳನ್ನು ಜತೆಗೂಡಿಸಿದೆವು; ಈ ವರ್ಷದ ಅಂತ್ಯದ ವೇಳೆಗೆ ಗಣನೀಯ ಸಂಖ್ಯೆಯಲ್ಲಿ ಉತ್ಪಾದಕರು ನಮ್ಮ ಜತೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದರು.bts-2020-appreciation-domestic-diagnostic-products-international-quality

ಜಾಗತಿಕ ಕಂಪನಿಗಳ ಮಾನದಂಡದ ಆಧಾರದಲ್ಲೇ ಕಟ್ಟುನಿಟ್ಟಾಗಿ ನಾವು ಮೌಲ್ಯಮಾಪನ ಮಾಡುತ್ತೇವೆ. ಈ ಮಾನದಂಡದ ಪ್ರಕಾರ ಉತ್ಪನ್ನಗಳ ಉತ್ಪಾದನೆ ಕಷ್ಟವಲ್ಲ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲೇ ದೇಶೀಯ ಉತ್ಪನ್ನಗಳ ತಯಾರಿಕೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಭಾರತದಲ್ಲಿ ಅನೇಕ ಯಶಸ್ವಿ ಉದ್ಯಮಿಗಳಿದ್ದಾರೆ. ಆದರೆ ಅವರನ್ನು ಪರಸ್ಪರ ಬೆಸೆದು ಪೂರ್ಣ ಉತ್ಪನ್ನವನ್ನು ಪಡೆಯುವ ಕೆಲಸವಾಗಿರಲಿಲ್ಲ. ಜೈವಿಕ ತಂತ್ರಜ್ಞಾನದ ಬಗ್ಗೆ ಮಾತು ಆರಂಭಿಸಿ 50 ವರ್ಷಗಳೇ ಸಂದಿವೆ. ತುಂಬಾ ಮುಖ್ಯವಾದ, ಆದರೆ ಪ್ರಾಥಮಿಕವಾದ ಉತ್ಪನ್ನಗಳು ಇನ್ನೂ ನಮ್ಮಲ್ಲಿ ಉತ್ಪಾದನೆಯಾಗುತ್ತಿಲ್ಲ. ದೇಶದಲ್ಲಿ ಅತ್ಯಂತ ಮೂಲಭೂತವಾದ ಡಿಎನ್‌ಟಿಪಿ ಉತ್ಪಾದಕರಿರಲಿಲ್ಲ. ಆರ್‌ಎನ್‌ಎ ನಕಲಿಸುವಿಕೆಗೆ ಅಗತ್ಯವಾಗಿರುವ ಗ್ವಾನಿಡಿನಿಯಂ ಥಯೋಸೈನೈಡ್ ಉತ್ಪಾದಕರ ಕೊರತೆಯಿತ್ತು. ನಮ್ಮಲ್ಲಿ ಲಭ್ಯವಿಲ್ಲದ ಅಲ್ಟ್ರಾಪ್ಯೂರ್ ಅಸಿಟೋ ನೈಟ್ರೈಲ್‌ಗೆ ದೇಶದಲ್ಲಿ ಭಾರೀ ಬೇಡಿಕೆಯಿದೆ. ಈ ರೀತಿಯ ಅಂತರಗಳನ್ನು ಕಂಡುಕೊಂಡು ಅವುಗಳನ್ನು ಬೆಸೆಯುವ ಅಗತ್ಯವಿದೆ. ಅನೇಕ ಸಣ್ಣ ಕಂಪನಿಗಳಿಗೆ ಮಾರುಕಟ್ಟೆಯ ಗಾತ್ರದ ಬಗ್ಗೆ ಹಾಗೂ ಅವಕಾಶಗಳ ಬಗ್ಗೆ ಇನ್ನೂ ಅರಿವಿಲ್ಲ ಎಂದು ಲಲಿತ್ ಕಿಶೋರ್ ಬೊಟ್ಟು ಮಾಡಿದರು.

ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದೇ ಸವಾಲು

ಚರ್ಚೆಯಲ್ಲಿ ಭಾಗವಹಿಸಿದ ಜೆನಿ ಲ್ಯಾಬೊರೇಟರೀಸ್ ಪ್ರೈ. ಲಿ.ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ  ಡಾ.ಎಸ್ ಚಂದ್ರಶೇಖರ್ ಅವರು ತಮ್ಮ ಸಂಸ್ಥೆಯು ವಿದೇಶಕ್ಕೂ ರವಾನಿಸುವಷ್ಟರಮಟ್ಟಿಗೆ ರೀಏಜೆಂಟ್‌ಗಳ ಉತ್ಪಾದನೆ ನಡೆಸುತ್ತಿದೆ. ಗುಣಮಟ್ಟವೂ ಉತ್ತಮವಾಗಿದೆ ಎಂದರು. ತಂತ್ರಜ್ಞಾನ ಬದಲಾಗುತ್ತಲೇ ಇರುತ್ತದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ “ಆತ್ಮನಿರ್ಭರ ಭಾರತ” ಸಾಧಿಸುವ ನಿಟ್ಟಿನಲ್ಲಿ ನಾವು ಬಹುದೂರ ಸಾಗಬೇಕಿದೆ ಎಂದರು.

ಸವಾಲಿನ ಸಂದರ್ಭದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಭಾರತವು ಅನನ್ಯವಾಗಿದೆ. ನಮ್ಮಲ್ಲಿ ಸಮನ್ವಯತೆಯ ಕೊರತೆಯಿಂದಾಗಿ ಎಲ್ಲಾ ಶ್ರಮಗಳು ಬಿಡಿಬಿಡಿಯಾಗಿವೆ. ಇದೆಲ್ಲವನ್ನೂ ಒಟ್ಟುಗೂಡಿಸಿದಾಗ ಹೆಚ್ಚು ಸಮರ್ಥವಾಗುತ್ತದೆ. ಕೋವಿಡ್‌ನ ಲಸಿಕೆ ಪೂರೈಕೆಯಲ್ಲಿ ಸಾಗಣೆಯು ಬಹುದೊಡ್ಡ ಸವಾಲಾಗಿದೆ ಎಂದು ಸಿಂಜೀನ್ ಇಂಟರ್‌ನ್ಯಾಶನಲ್‌ನ ಸಿಇಒ ಡಾ.ಮಹೇಶ್ ಭಲ್ಗಾಟ್ ಉಲ್ಲೇಖಿಸಿದರು.

ಕೋವಿಡ್ ವ್ಯಾಕ್ಸಿನ್‌ಗೆ ದೊಡ್ಡ ಪ್ರಮಾಣದಲ್ಲಿ ನಾವು ಸಿದ್ಧರಾಗುತ್ತಿದ್ದೇವೆ.  ಗುಣಮಟ್ಟ ಕೂಡಾ ಮುಖ್ಯವಾಗಿದೆ ಎಂದು ಹ್ಯೂವೆಲ್ ಲೈಫ್ ಸೈನ್ಸ್ ಪ್ರೈ. ಲಿ.ನ ನಿರ್ದೇಶಕರಾದ ಡಾ. ಶಿಶೀರ್ ಹೇಳಿದರು.

ನೈರ್ಮಲ್ಯದ ಅರಿವಿನ ಕೊರತೆ

ಬಹುತೇಕ ಜನರಿಗೆ ನೈರ್ಮಲ್ಯ,ದ ಅರಿವೇ ಇರಲಿಲ್ಲ. ಪ್ರಾಥಮಿಕ ನೈರ್ಮಲ್ಯವು ಯಾಕೆ ಪ್ರಾಮುಖ್ಯ ಎಂಬುದೇ ತಿಳಿದಿರಲಿಲ್ಲ. ಸಂಪೂರ್ಣವಾಗಿ ನಿರ್ಲಕ್ಷ್ಯ ಇತ್ತು. ಈಗ ಅರಿವು ಹೆಚ್ಚುತ್ತಿದೆ. ಆದರೆ ಉತ್ಪನ್ನಗಳ ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಬೇಕಿದೆ ಎಂದು ಮೈಕ್ರೋಗೋ ಎಲ್ಎಲ್‌ಪಿ  ಸಂಸ್ಥಾಪಕರಾದ ಡಾ.ರಚನಾ ದವೆ  ಒತ್ತಿ ಹೇಳಿದರು.

ಈ ಚರ್ಚೆಯನ್ನು ನಿರ್ವಹಿಸಿದ ಜೈವಿಕ ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಬಯೋಫಾರ್ಮಾ ಮಿಶನ್‌ನ ಮಿಶನ್ ನಿರ್ದೇಶಕರಾದ ಡಾ.ಕವಿತಾ ಸಿಂಗ್, 2024ರ ವೇಳೆಗೆ 100 ಶತಕೋಟಿ ಡಾಲರ್ ಮೌಲ್ಯದ ಜೈವಿಕ ಉತ್ಪಾದನಾ ಕೇಂದ್ರವನ್ನು ನಿರ್ಮಿಸುವುದು ಭಾರತ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ವೇಗವಾಗಿ ಪ್ರತಿಕ್ರಿಯೆ, ಡಯಗ್ನೋಸ್ಟಿಕ್, ತಪಾಸಣೆ, ಪರೀಕ್ಷೆ ಇತ್ಯಾದಿ ಆರೋಗ್ಯಸೇವಾ ಉತ್ಪನ್ನಗಳ ಉತ್ಪಾದನೆ ವರ್ಧನೆಯಂತಹ ಸವಾಲುಗಳು ಇವೆ. ಪಿಪಿಇ ಕಿಟ್, ಡಯಗ್ನೋಸ್ಟಿಕ್ ಕಿಟ್ ಅನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇಂದು ರಫ್ತು ಮಾಡತೊಡಗಿದೆ. ಸಣ್ಣ ಕಂಪನಿಗಳನ್ನು ಬೆಳೆಸುತ್ತಾ ದೊಡ್ಡ ಕಂಪನಿಗಳು ಬೆಳೆಯಬೇಕು ಎಂದು ಆಶಿಸಿದರು.

Key words: BTS -2020-Appreciation – domestic -diagnostic -products – international quality.

website developers in mysore