ಬಿ.ಎಸ್.ವೈ ಮುಕ್ತ ಬಿಜೆಪಿ ಆಗುವ ಕಾಲವೂ ಸನ್ನಿಹಿತ : ರಾಜ್ಯ ಕಾಂಗ್ರೆಸ್ ಟೀಕೆ 

Promotion

ಬೆಂಗಳೂರು,ಏಪ್ರೀಲ್,01,2021(www.justkannada.in) : ಈ ಸರ್ಕಾರ  ಬಿಜೆಪಿ ಪಕ್ಷದ ರಾಜಕೀಯ ವ್ಯಭಿಚಾರಕ್ಕೆ ಹುಟ್ಟಿದ “ಅನೈತಿಕ ಕೂಸು”. “ಆಪರೇಷನ್ ಕಮಲ”ಎನ್ನುವ ಅನಿಷ್ಟ ಪದ್ಧತಿಯನ್ನು ಹುಟ್ಟುಹಾಕಿ ಶಾಸಕರನ್ನು ಐಟಿ, ಇಡಿ ಬೆದರಿಕೆ, ಹನಿಟ್ರಾಪ್ ಬ್ಲಾಕ್ಮೇಲ್, ಹಣದ ಆಮಿಷ ಎಲ್ಲವನ್ನೂ ಬಳಸಿಕೊಂಡಿದ್ದು, ಒಂದೊಂದಾಗಿ ಬಯಲಾಗುತ್ತಿವೆ.  ಇದರೊಂದಿಗೆ  ಬಿ.ಎಸ್.ವೈ ಮುಕ್ತ ಬಿಜೆಪಿ ಆಗುವ ಕಾಲವೂ ಸನ್ನಿಹಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದುದ್ದನ್ನ ಕಾಂಗ್ರೆಸ್ ಎತ್ತಿ ಹಿಡಿದಾಗ ಬಿಜೆಪಿ ರಾಜಕೀಯ ದುರುದ್ದೇಶವೆಂದು ತಿಪ್ಪೆ ಸಾರಿಸುತ್ತಿತ್ತು. ಆದರೆ, ಸ್ವತಃ ಬಿಜೆಪಿ ಶಾಸಕರೇ ಇತ್ತೀಚಿಗೆ ತಮಗಾದ ಅನ್ಯಾಯ ವ್ಯಕ್ತಪಡಿಸುತ್ತಿದ್ದರು, ಯತ್ನಾಳ್ ಬಹಿರಂಗವಾಗಿ ಬಂಡವಾಳ ಬಿಚ್ಚಿಟ್ಟಿದ್ದಾರೆ. ಈಗ ಈಶ್ವರಪ್ಪ ಗಂಭೀರ ಆರೋಪ ಎತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. BSY-free-BJP-Becoming-Time-Imminent-State-Congress- criticism

 

 

ಸಿಎಂ ಕೊರಳಲ್ಲಿ ಆರೋಪಗಳ ಸರಮಾಲೆಯಿದ್ದು, ದೇವನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ , ದೇವರಬೀಸನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ಆಪರೇಷನ್ ಕಮಲದಲ್ಲಿ ಹಣ ಆಮಿಷದ ಪ್ರಕರಣ, ಬಿ.ಎಸ್.ವೈ ಬಿಜೆಪಿ ಅವರೇ, ಗೋಮೂತ್ರ ಸಿಂಪಡಿಸಿದರೂ ನಿಮಗಂಟಿದ ಕಳಂಕ ಶುದ್ಧವಾಗುವುದಿಲ್ಲ! ಕಳಂಕಿತರಾಗಿ ಅಧಿಕಾರ ನಡೆಸಲು ಸ್ವಲ್ಪವೂ ನಾಚಿಕೆ ಎನಿಸುತ್ತಿಲ್ಲವೇ? ಎಂದು ಆಕ್ರೋಶವ್ಯಕ್ತಪಡಿಸಿದೆ.

key words : BSY-free-BJP-Becoming-Time-Imminent-State-Congress- criticism