ಅಂದು ಬಿಎಸ್ ವೈ ನನ್ನ ಮುಂದೆ ನಿಂತಿದ್ಧ ಸ್ಥಿತಿಯೇ ಬೇರೆ: ಈಗಿನ ಅವರ ನಡವಳಿಕೆಗಳೇ ಬೇರೆ- ಹೆಚ್.ವಿಶ್ವನಾಥ್ ಮತ್ತೆ  ಅಸಮಾಧಾನ…

kannada t-shirts

ಮೈಸೂರು, ಡಿಸೆಂಬರ್,2,2020(www.justkannada.in):  ಸಚಿವರಾಗಲು ಹೆಚ್.ವಿಶ್ವನಾಥ್ ಅನರ್ಹ ಎಂದು ಹೈಕೋರ್ಟ್ ತೀರ್ಪು ನೀಡಿದ್ಧ ಬೆನ್ನಲ್ಲೆ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದೀಗ ಮತ್ತೆ ಮೈಸೂರಿನಲ್ಲಿ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ. logo-justkannada-mysore

ನಿನ್ನೆಯಷ್ಟೇ ಸಿ.ಪಿ ಯೋಗೇಶ್ವರ್ ಮತ್ತು  ಸಂತೋಷ್  ವಿರುದ್ಧ ನೇರಾನೇರ ಆರೋಪ ಮಾಡಿದ್ಧ ಹೆಚ್.ವಿಶ್ವನಾಥ್ ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೇ ತೀವ್ರ ಬೇಸರ ವ್ಯಕ್ತಪಡಿಸಿದ್ಧಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್.ವಿಶ್ವನಾಥ್,  ಸರ್ಕಾರದ ರಚನೆ ಸಂದರ್ಭದಲ್ಲಿ ಬಿಎಸ್‌ ಯಡಿಯೂರಪ್ಪ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ. ಇಂದಿನ ಬಿಎಸ್‌ವೈ ನಡವಳಿಕೆಗಳೇ ಬೇರೆ. ರಾಜಕಾರಣದಲ್ಲಿ‌ ಕೃತಜ್ಞತೆ ಕಡಿಮೆ ಆಗುತ್ತಿದೆ. ನಾವು ಮಾಡಿದ ಕೆಲಸವನ್ನ ಯಾರು ಕೃತಜ್ಞ ಮಾಡಿಕೊಂಡಿಲ್ಲ ಎಂದು ಸಿಎಂ ನಡವಳಿಕೆ ಬಗ್ಗೆ ಹೆಚ್.ವಿಶ್ವನಾಥ್  ಅಸಮಾಧಾನ ತೋರ್ಪಡಿಸಿದ್ದಾರೆ.

ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ

ಹಾಗೆಯೇ ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ. ಎಲ್ಲರು ಜೊತೆಯಾಗಿದ್ದಾರೆ. ನಾವಿದ್ದೀವಿ ಅಂತ ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಹಾಗಾಗಿ ನಾನು ಒಂಟಿಯಾಗಿಲ್ಲ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ..

ಇನ್ನು ನಿನ್ನೆಯ ಮಧ್ಯಂತರ ತೀರ್ಪಿನ ಆದೇಶ ನೋಡಿದ್ದೇನೆ. ಅದರ ತೀರ್ಪಿನ ಆರ್ಡರ್ ಕಾಪಿ‌ ಇನ್ನು ಕೈಸೆರಿಲ್ಲ. ಅದರಲ್ಲಿ ಸಚಿವರಾಗಬಾರದು ಅಂತ ಮಾತ್ರ ಹೇಳಿದ್ದಾರೆ. 2027ರವರೆಗೆ ನಾನು ವಿಧಾನಪರಿಷತ್ ಸ್ಥಾನಕ್ಕೆ ತೊಂದರೆಯಿಲ್ಲ. ಚುನಾವಣೆಗೆ ಸ್ಪರ್ಧಿಸುವ ಮೂಲಕ ಅನರ್ಹತೆ ಹೋಗಲಾಡಿಸಿಕೊಳ್ಳಿ ಅಂತ ಸುಪ್ರೀಂಕೋರ್ಟ್ ಹೇಳಿದೆ.  ಸೋಲು- ಗೆಲುವಿನ ಬಗ್ಗೆ ತೀರ್ಪಿನಲ್ಲಿ ಉಲ್ಲೇಖವಾಗಿಲ್ಲ. ಆದ್ದರಿಂದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಸಿ.ಪಿ.ಯೋಗೇಶ್ವರ್‌ ಗೆ ಮಂತ್ರಿ ಸ್ಥಾನ ನೀಡೋಕೆ ಅರ್ಜೆಂಟ್ ಯಾಕೇ..?

ಎಂಎಲ್ ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದಕ್ಕೆ ಆಕ್ಷೇಪಿಸಿರುವ ಹೆಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್‌ ಗೆ ಮಂತ್ರಿ ಸ್ಥಾನ ನೀಡೋಕೆ ಅರ್ಜೆಂಟ್ ಯಾಕೇ? ಅವರೇನು ಸರ್ಕಾರ ಬಿಳಿಸೋಕೆ ಕಾರಣರಾದವರೇ? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ? ಬಾಂಬೆ ಪುಣೆಯಲ್ಲಿ ಸೂಟ್‌ ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನ ಮಂತ್ರಿ ಮಾಡೋಕೆ ಅರ್ಜೆಂಟ್ ಯಾಕೇ ಬೇಕು. ಬಿಜೆಪಿ ಸರ್ಕಾರ ಬರೋದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು. ಯತ್ನಾಳ್ ಅಥವ ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರಿಗೆ ಮಂತ್ರಿ ಮಾಡಿ. ಇಂತಹ ಆತುರದ ನಿರ್ಧಾರ ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ ಎಂದು ಸಲಹೆ ನೀಡಿದರು.

ತಂದೆಯನ್ನ ಕೊಂದವನನ್ನೇ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ…

ಶೇಕ್ಸ್‌ಪೀಯರ್ ನಾಟಕದ ಉದಾಹರಣೆ ಉಲ್ಲೇಖಿಸಿ ಸರ್ಕಾರದ ಇಂದಿನ ಸ್ಥಿತಿ ಬಗ್ಗೆ ಮಾರ್ಮಿಕ ಹೇಳಿಕೆ ನೀಡಿದ ಹಳ್ಳಿಹಕ್ಕಿ ವಿಶ್ವನಾಥ್. ನಾವು ವಿರೋಧಿಸಿದವರೇ ಈಗ ಅವರ ಸ್ನೇಹಿತರಾಗಿದ್ದಾರೆ. ನಾವು ಯಾರನ್ನ ವಿರೋಧ ಮಾಡಿ ಬಂದ್ವಿ ಅವರೇ ಈಗ ಬಿಎಸ್‌ವೈ ಸ್ನೇಹಿತರಾಗಿದ್ದಾರೆ. ಇದು ತಂದೆಯನ್ನ ಕೊಂದವನ್ನನ್ನ ತಾಯಿ ಮದುವೆಯಾದಂತೆ ಕಾಣುತ್ತಿದೆ. ಶೇಕ್ಸ್‌ಪೀಯರ್ ನಾಟಕದಲ್ಲಿ ಇದೆ ರೀತಿಯ ಪ್ರಸಂಗ ಇದೆ. ನಮ್ಮ‌ ಪರಿಸ್ಥಿತಿ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೇ ಇದೆ ಎಂದು  ಪರೋಕ್ಷವಾಗಿ ಕುಮಾರಸ್ವಾಮಿ ಸಖ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಲವ್ ಜಿಹಾದ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಯನ್ನ ಖಂಡಿಸಿದ ಹೆಚ್.ವಿಶ್ವನಾಥ್. ಮಾಜಿ‌ ಸಿಎಂ ಆದವರೋಬ್ಬರು ಆ ರೀತಿಯ ಪದ ಬಳಕೆ ಮಾಡಬಾರದು. ಬೆರಕೆ ಅನ್ನೋ ಪದ ಸರಿಯಲ್ಲ. ಆ ಲೆಕ್ಕದಲ್ಲಿ ನೀವು ಬೆರಕೆಯೇ, ನಾನು ಬೆರಕೆಯೇ. ಬೇರೆ ಬೇರೆ ಪಕ್ಷದಲ್ಲಿ ಇದ್ದು ಬಂದಿದ್ದೀರಾ ಅದಕ್ಕೆ ಬೆರಕೆ ಅನ್ನಬಹುದೇ? ಒಬ್ಬ ಮುತ್ಸದ್ದಿಯಾಗಿ ನಾವು ಭಾರತೀಯ ಸಂಸ್ಕೃತಿಯನ್ನ ಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಲೇವಡಿ ಮಾಡಿದರು. BS yeddyurappa- stood -behavior - different –nowmysore- MLC-H, Vishwanath - upset

ಸಾ.ರಾ.ಮಹೇಶ್ ಬಗ್ಗೆ ನನಗೆ ಪ್ರಶ್ನೆಯನ್ನೆ ಕೇಳಬೇಡಿ…

ಸಾ.ರಾ ಮಹೇಶ್ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೈಮುಗಿದು ಉತ್ತರಿಸಿದ ಹೆಚ್.ವಿಶ್ವನಾಥ್, ಸಾ.ರಾ.ಮಹೇಶ್ ಬಗ್ಗೆ ನನಗೆ ಪ್ರಶ್ನೆಯನ್ನೆ ಕೇಳಬೇಡಿ. ಸಾ.ರಾ.ಮಹೇಶ್ ನನ್ನ ಅನುಭವದ ಮುಂದೆ ನನಗೆ ಸಮನಲ್ಲ. ಅಂತವರ ಬಗ್ಗೆ ನಾನು ಪ್ರತಿಕ್ರಿಯೆಯನ್ನೆ ನೀಡೋಲ್ಲ. ಆತ‌ ನಮ್ಮ‌ ಊರಿನವನು ಅಲ್ವಾ. ಅದಕ್ಕೆ ನನ್ನ‌ ಮೇಲಿನ ಪ್ರಿತಿಯಿಂದ ಪದೆ ಪದೆ ಮಾತನಾಡುತ್ತಾನೆ. ಆದ್ರೆ ಅವನ ಬಗ್ಗೆ ನನ್ನ ಬಳಿ ಪ್ರಶ್ನೆಯನ್ನೆ ಕೇಳಬೇಡಿ. ಸಾ.ರಾ.ಮಹೇಶ್ ಬಗ್ಗೆ ಮಾತನಾಡೋಲ್ಲ ಎಂದರು.

english summary….

“BSY who was standing in front of me that day and his present behaviour is entirely different”: H. Vishwanath
Mysuru, Dec. 2, 2020 (www.justkannada.in): Following Hon’ble High Court orders stating that he is ineligible to become a minister, MLC H. Vishwanath has yet again expressed his displeasure on BJP leaders.
Following his allegations against on C.P. Yogeshwar and N.R.Santhosh yesterday, H. Vishwanath today expressed his displeasure on Chief Minister B.S. Yedyurappa. Addressing a press here in Mysuru today he said that Yedyurappa’s behaviour had changed completely now. “In politics gratitude no more has any place. Nobody has gratitude for the work done by us,” he said.BS yeddyurappa- stood -behavior - different –nowmysore- MLC-H, Vishwanath - upset
On the occasion, he also clarified that he would appeal in the Hon’ble Supreme Court, over the HC orders.
Keywords: H.Vishwanath/ Supreme Court/ B S Yedyurappa

Key words: BS yeddyurappa- stood -behavior – different –nowmysore- MLC-H, Vishwanath – upset

website developers in mysore