ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಉಳಿಯಲ್ಲ- ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

Promotion

ಬೆಂಗಳೂರು,ಅಕ್ಟೋಬರ್.20,2020(www.justkannada.in):  ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಉಳಿಯಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್ ಸಿಡಿಸಿದ್ದಾರೆ.jk-logo-justkannada-logo

ವಿಜಯಪುರದಲ್ಲಿ ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಎಸ್ ವೈ ಸಿಎಂ ಆಗಿ ಬಹಳ ದಿನ ಇರುವುದಿಲ್ಲ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗ್ತಾರೆ. ಉತ್ತರ ಕರ್ನಾಟಕದವರು 100 ಮಂದಿ ಶಾಸಕರನ್ನು ಗೆಲ್ಲಿಸುತ್ತಾರೆ. ಉಳಿದ ಭಾಗದಲ್ಲಿ ಬಿಜೆಪಿಯ 15-20 ಮಂದಿ ಗೆಲ್ಲಿಸುತ್ತಾರೆ. ಇವರಲ್ಲಿ ಒಬ್ಬರು ಸಿಎಂ ಆಗುತ್ತಾರೆ. ಹೀಗೆ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.bs-yeddyurappa-cm-does-not-bjp-mla-basanagouda-patil-yatnal

ನನ್ನ ಕ್ಷೇತ್ರದ 125 ಕೋಟಿ ಅನುದಾನ ಕಡಿತ ಮಾಡಿದ ಹಿನ್ನೆಲೆ ಸಿಎಂ ಬಿಎಸ್ ವೈ ಮತ್ತು ನನ್ನ ಮಧ್ಯೆ ಜಗಳ ಶುರುವಾಗಿದೆ. ಇನ್ನೇನು ಸಿಎಂ ಬಿಎಸ್ ವೈ ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

Key words: BS Yeddyurappa – CM -does not-  BJP –MLA- Basanagouda Patil Yatnal