ರಾಣಿ 2ನೇ ಎಲಿಜಬೆತ್  ನಿಧನಕ್ಕೆ ಬೆಂಗಳೂರಿನ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನ್ ಸಂತಾಪ.

Promotion

ಬೆಂಗಳೂರು,ಸೆಪ್ಟಂಬರ್,10,2022(www.justannda.in): ಬೆಂಗಳೂರಿನ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನ್, ಸೆಪ್ಟೆಂಬರ್ 8ರಂದು ನಿಧನರಾದ ರಾಣಿ ಎಲಿಜಬೆತ್ II ಅವರಿಗೆ ಸಂತಾಪವನ್ನು ವ್ಯಕ್ತಪಡಿಸಿದೆ.

ಡೆಪ್ಯೂಟಿ ಹೈ ಕಮೀಷನರ್ ಅವರ ನಿವಾಸದಲ್ಲಿ (6ನೇ ಮಹಡಿ, ಪ್ರೆಸ್ಟೀಜ್ ಹೆರಮಿಟೇಜ್, ಕೆನ್ಸಿಂಗ್ಟನ್ ರಸ್ತೆ, ಹಲಸೂರು, ಬೆಂಗಳೂರು) ಇಲ್ಲಿ ಸಂತಾಪ ಸೂಚಿಸುವ ಒಂದು ಪುಸ್ತಕವನ್ನು ಈ ಕೆಳಕಂಡ ದಿನಾಂಕ ಹಾಗೂ ಸಮಯದಲ್ಲಿ ತೆರೆದಿರುತ್ತದೆ.

ಶುಕ್ರವಾರ, 9 ಸೆಪ್ಟೆಂಬರ್ 2 ಗಂಟೆಯಿದ ಸಂಜೆ 7ಗಂಟೆಯವರೆಗೆ 10 ಸೆಪ್ಟೆಂಬರ್ ಶನಿವಾರ,  ಬೆಳಿಗ್ಗೆ 10 ಗಂಟೆಯಿಂದ-ಸಂಜೆ  ಗಂಟೆಯವರೆಗೆ. ಸೋಮವಾರ, 12ನೇ ಸೆಪ್ಟೆಂಬರ್ ನಿಂದ ಶುಕ್ರವಾರ 16ನೇ ಸೆಪ್ಟೆಂಬರ್, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ರಾಣಿ ಎಲಿಜಬೆತ್ ನಿಧನಕ್ಕೆ ಸಂತಾಪ ಸೂಚಿಸಲು ಬಯಸುವವರಿಗೆ ಇಂಟೆರ್ನೆಟ್ ನಲ್ಲೂ ಒಂದು ಸಂತಾಪ ಸೂಚಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ.

ದಯಮಾಡಿ ಭೇಟಿ ನೀಡಿ: https://www.royal.uk/send-message-condolence

Key words: British- Deputy -High -Commission –Bengaluru- condoles -Queen Elizabeth II- death