ಕಾಂಗ್ರೆಸ್ ನಿಂದಲೇ ಲಂಚದ ಹುಟ್ಟು: ದೇಶದ ಸಂಪತ್ತು ಹೀರಿ ಬೆಳೆದಿದ್ದಾರೆ- ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ.

Promotion

ರಾಯಚೂರು,ಆಗಸ್ಟ್,13,2022(www.justkannada.in):  ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವಿಟ್ ಮತ್ತು ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಲಂಚದ ಹುಟ್ಟೇ ಕಾಂಗ್ರೆಸ್ ನಿಂದಾಗಿದೆ ಕಾಂಗ್ರೆಸ್ ನವರು ದೇಶದ ಸಂಪತ್ತು ಹೀರಿ ಬೆಳೆದಿದ್ದಾರೆ.  ಸುಳ್ಳು ಟ್ವೀಟ್ ಮಾಡೋರು ಇವರೆ್ಲಾ ನಾಯಕರಾ ಬೇರೆ ಬೇರೆ ಕಡೆ ಲಘುವಾಗಿ ಮಾತನಾಡುತ್ತಾ ಹೋಗೋದು ಇದು ಲೀಡರ್ ಗುಣ ಏನ್ರಿ..? ಸಿಎಂ ಚೇಂಜ್ ಅಂತಾ ಟ್ವೀಟ್ ಮಾಡಲು ಇವರ್ಯಾರು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಗುಡುಗಿದ್ದಾರೆ.

ಮಂತ್ರಾಲಯದಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ನವರು ಲಂಚ ತೆಗೆದುಕೊಂಡು ಮಾಡಬಾರದು ಮಾಡಿದ್ರು. 120 ಸ್ಥಾನ ಇದ್ದ ಕಾಂಗ್ರೆಸ್ 80 ಸ್ಥಾನಕ್ಕೆ ಬಂದಿದೆ. ಚೆನ್ನಾಗಿ ಆಡಳಿತ ಕೊಟ್ಟಿದ್ದರೇ ಜನ ಯಾಕೆ ಸೋಲಿಸುತ್ತಿದ್ದರು. ಕೆಆರ್ ರಮೇಶ್ ಕುಮಾರ್ ಹೇಳಿದ್ದು ಸರಿಯಿದೆ ಎಂದರು.

ಯುವತಿಯರು ನೌಕರಿ ಪಡೆಯಬೇಕಾದರೇ ಮಂಚ ಹತ್ತಬೇಕು ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅರಗ ಜ್ಞಾನೇಂದ್ರ,  ಪ್ರಿಯಾಂಕ್ ಖರ್ಗೆ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪ್ರಿಯಾಂಕ್ ಖರ್ಗೆ ಇಂಥ ಹೇಳಿಕೆ ನೀಡುತ್ತಲೇ ಇರ್ತಾರೆ.  ಅವರು ಪ್ರಚಾರದ ಖರ್ಗೆ.   ಏನೋ ಗಿಮಿಕ್ ಮಾಡಿಕೊಂಡು ಬೆಳೆಯಬೇಕು ಅಂದುಕೊಂಡಿದ್ದಾರೆ ಎಂದು ಹರಿಹಾಯ್ದರು.

Key words: Bribery – Congress- Home Minister -Araga Gyanendra