ಸಿಎಂ ಸಿದ್ಧರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಸಚಿವರು ಭಾಗಿ.

Promotion

ಬೆಂಗಳೂರು,ನವೆಂಬರ್,4,2023(www.justkannada.in):  ಸಿಎಂ ಕಾವೇರಿ ನಿವಾಸದಲ್ಲಿ ಇಂದು ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಬ್ರೇಕ್​ಫಾಸ್ಟ್ ಮೀಟಿಂಗ್ ಆಯೋಜಿಸಿದ್ದಾರೆ.

ಸಿಎಂ ಕಾವೇರಿ ನಿವಾಸದಲ್ಲಿ ಸಚಿವರಿಗೆ ಉಪಾಹಾರಕೂಟ ಆಯೋಜನೆ ಮಾಡಲಾಗಿದ್ದು ಡಿಸಿಎಂ ಡಿಕೆ ಶಿವಕುಮಾರ್ ಸಚಿರಾದ ಡಾ.ಜಿ.ಪರಮೇಶ್ವರ್, ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ರಾಮಲಿಂಗರೆಡ್ಡಿ, ಎಂಬಿ ಪಾಟೀಲ್,  ಕೃಷ್ಣ ಭೈರೇಗೌಡ,  ಸಂತೋಷ್ ಲಾಡ್, ಬೋಸರಾಜು ಸೇರಿ 15 ಸಚಿವರು ಭಾಗಿಯಾಗಿದ್ದಾರೆ.

ಬ್ರೇಕ್ ಫಾಸ್ಟ್ ಮೀಟಿಂಗ್  ತೀವ್ರ ಕುತೂಹಲ ಮೂಡಿದೆ. ಪ್ರಸಕ್ತ ರಾಜಕೀಯ ಬೆಳವಣಿಗೆ, ಲೋಕಸಭಾ ಚುನಾವಣೆ ಬಗ್ಗೆ ಉಪಾಹಾರ ಕೂಟದಲ್ಲಿ ಚರ್ಚಿಸಲಿದ್ದಾರೆ.

Key words: Breakfast-meeting – CM Siddaramaiah- residence- DCM DK Sivakumar -ministers