ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕ ಸ್ಥಗಿತ: ವಿಪಕ್ಷ ನಾಯಕ ಸಿದ್ಧರಾಮಯ್ಯ ಘೋಷಣೆ.

ರಾಮನಗರ,ಜನವರಿ,13,2022(www.justkannada.in): ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ,ಜನರ ಆರೋಗ್ಯ ದೃಷ್ಠಿಯಿಂದ ಮೇಕೆದಾಟು ಯೋಜನೆ ಪಾದಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಕೊರೊನಾ ಮುಗಿದ ಬಳಿಕ ಮತ್ತೆ ಪಾದಯಾತ್ರೆ ಆರಂಭವಾಗಲಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಘೊಷಣೆ ಮಾಡಿದರು.

ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಜನರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ಜನರ ಆರೋಗ್ಯ ದೃಷ್ಠಿಯಿಂದ ಪಾದಯಾತ್ರೆ ಮೊಟಕುಗೊಳಿಸುತ್ತಿದ್ದೇವೆ. ಜನರ ಹಿತದೃಷ್ಠಿಯಿಂದ ಪಾದಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಕೊರೋನಾ ಕಡಿಮೆಯಾದ ಬಳಿಕ ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಮಾಡುತ್ತೇವೆ. ಕಾರ್ಯಕರ್ತರು ಉತ್ಸಹ ಕಳೆದುಕೊಳ್ಳುವುದು ಬೇಡ. ಮುಂದೆಯೂ ಇದೇ ಉತ್ಸಹದಲ್ಲಿ ಪಾದಯಾತ್ರೆ ಮಾಡೋಣ ಎಂದು ನುಡಿದರು.

ಹೋರಾಟದಿಂದ ನಾವು ಹಿಂದೆ ಸರಿಯಲ್ಲ. ಪಾದಯಾತ್ರೆ ಮತ್ತೆ ಮಾಡೇ ಮಾಡುತ್ತೇವೆ ಪಾದಯಾತ್ರೆ ಎಲ್ಲಿ ನಿಂತಿದೆ ಅಲ್ಲಿಂದಲೇ ಮಾಡುತ್ತೇವೆ. ಪಾದಯಾತ್ರೆ ಎಲ್ಲಿ ಅಂತ್ಯಗೊಳ್ಳಬೇಕೋ ಅಲ್ಲೇ ಅಂತ್ಯಗೊಳ್ಳುತ್ತದೆ. ಎಲ್ಲರೂ ಒಟ್ಟಾಗಿ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ನಿನ್ನೆ 15 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ತಗುಲಿದೆ. ಮೇಕೆದಾಟು ಯೋಜನೆಗೆ ಬಹಳ ಉತ್ಸಹದಿಂದ ಬಾಗವಹಿಸಿದ್ದಿರಿ ಪಾದಯಾತ್ರೆಗೆ ಬಹಳ ಅಭೂತಪೂರ್ವ ಯಶಸ್ಸು ತಂದಿದ್ದೀರಿ. ಕೊರೋನಾ ಹೆಚ್ಚಾಗಲು ಕಾಂಗ್ರೆಸ್ ಕಾರಣ ಅಲ್ಲ. ಕೊರೊನಾ 3ನೇ ಅಲೆ ಸ್ಪೋಟಕ್ಕೆ ಕಾಂಗ್ರೆಸ್ ಕಾರಣವಲ್ಲ. ಬಿಜೆಪಿಯೇ ಕೊರೋನಾ ಹೆಚ್ಚಾಗಲು ಕಾರಣ. ಕೊರೋನಾ 3ನೇ ಅಲೆ ಶುರುವಾದರೂ ಸಿಎಂ ಯಾವ ಸಭೆಯನ್ನೂನಿಲ್ಲಿಸಲಿಲ್ಲ. ನೂತನ ಎಂಎಲ್ ಸಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮಾಡಿದರು ಮೂರರಿಂದ ನಾಲ್ಕು ಸಾವಿರ ಜನ ಸೇರಿಸಿದ್ದರು. ಗೃಹ ಸಚಿವರ ಕ್ಷೇತ್ರದಲ್ಲೇ ಜಾತ್ರೆ ನಡೆಯಿತು. ರೇಣುಕಾಚಾರ್ಯ ಜಾತ್ರೆ ಮಾಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಇಲ್ಲ. ಯಾರ ಮೇಲೂ ಕೇಸ್ ಹಾಕಲಿಲ್ಲ. ಆದರೆ ಕಾಂಗ್ರೆಸ್ ಪಾದಯಾತ್ರೆ ತಡೆಯುವ ಉದ್ಧೇಶ ಸರ್ಕಾರಕ್ಕೆ ಇತ್ತು ಎಂದು ಕಿಡಿಕಾರಿದರು.

Key words: breakdown-Congress –padayatre

ENGLISH SUMMARY…

Cong. Mekedatu Padayatra halted temporarily: Siddaramaiah announces
Ramanagara, January 13, 2022 (www.justkannada.in): “We are halting the Mekedatu project padayatra for the time being keeping in mind the increasing number of COVID cases and health of the public. However, we will continue the padayatra once the pandemic comes under control,” Siddaramaiah announced today.
Addressing a press meet in Ramanagara today, he informed that it is the intention of the Congress party not to trouble the people. “We are halting the padayatra for the time being keeping in mind the health priority of the people. However, we will continue with it again from Ramanagara, once the pandemic comes under control. I request our party activists not to lose enthusiasm. Let us all participate in the padayatra with the same enthusiasm in the future,” he said.
He wished all the party members and supporters for participating in the padayatra. “Congress is not the reason for the increase in the number of Corona cases in the state, we are not responsible for the 3rd wave of the pandemic. BJP is the reason for the increase in the number of cases. The Chief Minister didn’t stop any public program even though the pandemic unearthed again. He went on with the new MLCs swearing-in ceremony with three to four thousand people. A Jatra was held in his home constituency. Renukacharya also participated in the Jatra nobody took any action against them. No case was booked against anyone. However they wanted to stop the Congress from its padayatra,” he alleged.
Keywords: Congress/ Mekedatu/ Padayatra/ temporarily halted