ಬ್ರಹ್ಮಶ್ರೀ ನಾರಯಣ ಗುರು  ಇಡೀ ಸಮಾಜದ ಮನುಕುಲಕ್ಕೆ ಮಾದರಿಯಾದವರು- ಶಾಸಕ ನಾಗೇಂದ್ರ ನುಡಿ…

Promotion

ಮೈಸೂರು,ಸೆ,13,2019(www.justkannada.in): ಬ್ರಹ್ಮಶ್ರೀ ನಾರಯಣ ಗುರು ಅವರು  ಇಡೀ ಸಮಾಜದ ಮನುಕುಲಕ್ಕೆ ಮಾದರಿಯಾದಂತವರು ಎಲ್ಲರೂ ಒಟ್ಟಾಗಿ ಇವರ ಜಯಂತಿ ಆಚರಿಸಬೇಕು ಎಂದು ಶಾಸಕ ನಾಗೇಂದ್ರ ನುಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ ನಾರಯಣ ಗುರು ಜಯಂತೋತ್ಸವ‌ ಸಮಿತಿ ಸಂಯುಕ್ತಶ್ರಯದಲ್ಲಿ ಕಲಾಮಂದಿರದಲ್ಲಿ  ಬ್ರಹ್ಮಶ್ರೀ ನಾರಯಣ ಗುರು ಜಯಂತೋತ್ಸವವನ್ನ ಆಚರಿಸಲಾಯಿತು. ದೀಪ ಬೆಳಗಿ, ನಾರಯಣ ಗುರು ಭಾವಚಿತ್ರಕ್ಕೆ ಪುಷ್ಪರ್ಚಣೆ ಮಾಡುವ  ಮೂಲಕ‌ ಶಾಸಕ ನಾಗೇಂದ್ರ ಕಾರ್ಯಕ್ರಮ ಉದ್ಘಾಟಸಿದರು.

ನಂತರ ಮಾತನಾಡಿದ ಶಾಸಕ ನಾಗೇಂದ್ರ, ಇಂತವರ ಜಯಂತಿ ಆಚರಣೆಯನ್ನು ಎಲ್ಲ ಒಟ್ಟಾಗಿ ಮಾಡಬೇಕು. ಜನರಿಗೆ ಇವರ ವಿಚಾರಧಾರೆ ಗಳ ಬಗ್ಗೆ ತಿಳಿಸುವಂತಹ ಕೆಲಸ ನಡೆಯಬೇಕು. ಇಡೀ ಸಮಾಜದ ಮನುಕುಲಕ್ಕೆ ಮಾದರಿಯಾದ ಗುರುಗಳು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಚನ್ನಪ್ಪ,ಈಡಿಗ ಸಂಘದ ಉಪಾಧ್ಯಕ್ಷ ರಾಜಶೇಖರ್ ಕದಂಬ, ಎಸ್.ಎನ್.ಡಿ.ಪಿ.ಅಧ್ಯಕ್ಷ ಮನೋಜ್,ಕನ್ನಡ ಪರ ಹೋರಾಟ ಗಾರ ತಾಯೂರು ವಿಠ್ಠಲ ಮೂರ್ತಿ ಭಾಗಿಯಾಗಿದ್ದರು.

Key words: Brahmashree Narayana Guru – model – whole society-MLA nagendra