ಕೊಡಗಿನಲ್ಲಿ  ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿತ:  ಅರ್ಚಕರು ಸೇರಿ 6 ಮಂದಿ ನಾಪತ್ತೆ…

Promotion

ಕೊಡಗು,ಆ,6,2020(www.justkannada.in):  ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಈ ನಡುವೆ ಮಳೆಯಿಂದಾಗಿ ಎರಡು ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದು ಅರ್ಚಕ ಸೇರಿ 6 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಲಕಾವೇರಿಯ ಪ್ರಧಾನ ಅರ್ಚಕರ ಮನೆಯ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದ ಪರಿಣಾಮ ಪ್ರಧಾನ ಅರ್ಚಕ ಸೇರಿದಂತೆ  6 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೊಡಗಿನಲ್ಲಿ ಎಡೆಬಿಡದೇ ಭಾರೀ ಮಳೆ ಸುರಿಯುತ್ತಿದ್ದು  ಬ್ರಹ್ಮಗಿರಿ ಗುಡ್ಡ ಕುಸಿತಗೊಂಡಿದೆ. ಹೀಗಾಗಿ ತಲಕಾವೇರಿಯಲ್ಲಿದ್ದ ಅರ್ಚಕ ಕುಟುಂಬ ಕಾಣೆಯಾಗಿದ್ದಾರೆ.  ತಲಕಾವೇರಿಯ ಪ್ರಧಾನ ಅರ್ಚಕ ಸೇರಿದಂತೆ ಅವರ ಪತ್ನಿ, ಅಡುಗೆ ಸಹಾಯಕ ಸೇರಿದಂತೆ ಆರು ಮಂದಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.brahmagiri-hill-collapse-houses-kodagu

ಇನ್ನು ಮಳೆ ಪ್ರವಾಹ ಭೀತಿ ಹಿನ್ನೆಲೆ ಮನೆ ಖಾಲಿ ಮಾಡುವಂತೆ ಜಿಲ್ಲಾಡಳಿತ ಅರ್ಚಕರ ಕುಟುಂಬಕ್ಕೆ ಸೂಚನೆ ನೀಡಿತ್ತು. ಆದರೆ ಭಾವನಾತ್ಮಕವಾಗಿ ಅರ್ಚಕ ಕುಟುಂಬದವರು ಮನೆ ಖಾಲಿ ಮಾಡಿರಲಿಲ್ಲ. ಗುಡ್ಡ ಕುಸಿತ ಹಿನ್ನೆಲೆ ಸುಮಾರು 2 ಕಿಲೋ ಮೀಟರ್ ವರೆಗೆ ಮನೆ ಜಾರಿಹೋಗಿದೆ ಎನ್ನಲಾಗಿದೆ. ಮಳೆಯಿಂದಾಗಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ‌ ನದಿಗಳು‌ ಉಕ್ಕಿ ಹರಿಯುತ್ತಿವೆ. ಮಳೆ, ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಡಗು ತತ್ತರಿಸಿದೆ.

Key words: Brahmagiri hill -collapse – houses – Kodagu