ಕಾಲು ಜಾರಿ ಬಿದ್ದು ನದಿಯಲ್ಲಿ ಕೊಚ್ಚಿ ಹೋದ ಯುವಕ…

Promotion

ಕಲ್ಬುರ್ಗಿ,ಅಕ್ಟೋಬರ್. 14,2020(www.justkannada.in):  ಕಾಲು ಜಾರಿ ಬಿದ್ದು ಭೀಮಾ ನದಿಯಲ್ಲಿ ಯುವಕ ಕೊಚ್ಚಿ ಹೋಗಿರುವ ಘಟನೆ ಕಲ್ಬರ್ಗಿ ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ಕಲ್ಬರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನರಬೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಗವಾನ್ ನೀರಿನಲ್ಲಿ ಕೊಚ್ಚಿ ಹೋದ ಯುವಕ. ರಾಜ್ಯದ ಕಲಬುರ್ಗಿ, ಯಾದಗಿರಿ, ಬೀದರ್‌ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಯುವಕ ಭಗವಾನ್ ಕಾಲು ಜಾರಿ ಬಿದ್ದು ಭೀಮಾ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ.boy - fell – bhima river -kalburgi

ಮಳೆಗೆ ಗೋಡೆ ಕುಸಿದು ವೃದ್ದೆ ಸಾವು…

ಭಾರಿ ಮಳೆಗೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಮೂಡಲಗೇರಿಯಲ್ಲಿ ನಡೆದಿದೆ. 70 ವರ್ಷದ ಶಂಕ್ರವ್ವ ಗೋಡೆ ಕುಸಿದು ಮೃತಪಟ್ಟವರು. ರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: boy – fell – bhima river -kalburgi