ಮಂಗಳೂರು ಏರ್ ಪೋರ್ಟ್‌ ನಲ್ಲಿ ಬಾಂಬ್ ಪತ್ತೆ ಹಿನ್ನಲೆ: ಮೈಸೂರಿನಲ್ಲಿ ಪೊಲೀಸರು ಅಲರ್ಟ್: ತೀವ್ರ ಕಟ್ಟೆಚ್ಚರ…

Promotion

ಮೈಸೂರು,ಜ,20,2020(www.justkannada.in):  ಮಂಗಳೂರು ವಿಮಾಣ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಈ ಸಂಬಂಧ ನಗರದ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ಮಾಡುವಂತೆ ಮೈಸೂರು‌ ನಗರ ಪೊಲೀಸ್ ಆಯಕ್ತ ಕೆ.ಟಿ ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರು ಏರ್ ಪೋರ್ಟ್, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿ. ಪ್ರವಾಸಿ ತಾಣಗಳು ಸೇರಿದಂತೆ ಇತರೆಡೆ ಹೈ ಅಲರ್ಟ್ ಇರುವಂತೆ ಸೂಚನೆ ನೀಡಿದ್ದಾರೆ.

ಗುಪ್ತದಳ ಇಲಾಖೆಯಿಂದ ತಕ್ಷಣ ಮಾಹಿತಿ ರವಾನೆ ಮಾಡುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ತಿಳಿಸಿದ್ದು, ನಗರದಲ್ಲಿ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆಯಾಗಿದ್ದು  ಕೆಂಜಾರು ಮೈದಾನದಕ್ಕೆ ಬಾಂಬ್ ಅನ್ನ ಸ್ಥಳಾಂತರಿಸಲಾಗುತ್ತಿದೆ.

Key words: Bomb Detective -Mangalore Airport- Police- alert – Mysore