ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೊ ಕಾರಿಡಾರ್ ಯೋಜನೆಗೆ ಎಡಿಬಿಯಿಂದ 500 ಮಿಲಿಯನ್ ಡಾಲರ್‌ ಗಳ ಸಾಲ ಪಡೆದ ಬಿಎಂಆರ್‌ಸಿಎಲ್.

Promotion

ಬೆಂಗಳೂರು, ಆಗಸ್ಟ್ 21, 2021 (www.justkannada.in): ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮೆಟ್ರೊ ಕಾರಿಡಾರ್ ಯೋಜನೆ ಸಾಕಾರಕ್ಕಾಗಿ ಏಷನ್ ಡೆವೆಲಪ್‌ ಮೆಂಟ್ ಬ್ಯಾಂಕ್ (ಎಡಿಬಿ) ೫೦೦ ದಶಲಕ್ಷ ಡಾಲರ್‌ಗಳನ್ನು (ರೂ.೩,೬೪೩ ಕೋಟಿ) ಸಾಲ ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿತು.

ಈ ೫೮.೧೮ ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ಎರಡು ಮೆಟ್ರೊ ಲೈನ್‌ ಗಳನ್ನು ಹೊಂದಿದೆ. ಸಿಲ್ಕ್ ಬೋರ್ಡ್-ಕೆ.ಆರ್.ಪುರಂ (ಹಂತ ೨ಎ) ಹಾಗೂ ಕಸ್ತೂರಿನಗರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಹಂತ ೨ಬಿ). ಇದರ ಅಂದಾಜು ವೆಚ್ಚ ರೂ.೧೪,೭೮೮ ಕೋಟಿ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಕ್ವಿಟಿ ಹಾಗೂ ಸಬ್‌ ಆರ್ಡಿನೇಟ್ ಆಗಿ ರೂ.೩,೯೭೩ ಕೋಟಿಗಳನ್ನು ಒದಗಿಸುತ್ತಿದ್ದು, ಕರ್ನಾಟಕ ಸರ್ಕಾರ ಭೂಮಿ ವಶಪಡಿಸಿಕೊಳ್ಳಲು ರೂ.೨,೭೬೨ ಕೋಟಿಗಳನ್ನು ಹೆಚ್ಚುವರಿಯಾಗಿ ಕೊಡುಗೆ ನೀಡುತ್ತಿದೆ.

ಗುರುವಾದ ಈ ಒಪ್ಪಂದದೊಂದಿಗೆ ಬಿಎಂಆರ್‌ಸಿಎಲ್ ಮಲ್ಟಿಲ್ಯಾಟರೆಲ್ ಅಥವಾ ಬೈಲ್ಯಾಟರೆಲ್ ಏಜೆನ್ಸಿಗಳ ಮೂಲಕ ಒಟ್ಟು ರೂ.೫,೯೬೦ ಕೋಟಿ ನಿಧಿಯನ್ನು ಕ್ರೋಢೀಕರಿಸುವ ಗುರಿಯನ್ನು ಸಾಧಿಸಿದಂತಾಗಿದೆ. ಮಾರ್ಚ್ ನಲ್ಲಿ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ (ಜೆಐಸಿಎ) ವತಿಯಿಂದ ೩೧೮ ದಶಲಕ್ಷ ಡಾಲರ್‌ಗಳನ್ನು (ರೂ.೨,೧೩೭ ಕೋಟಿ) ಪಡೆದುಕೊಳ್ಳಲಾಗಿತ್ತು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: BMRCL –receives- $ 500 million -loan – ADB – Bangalore International Airport -Metro Corridor Project