ತಂಡೀಸಡಕ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ- ಮೃಗಾಲಯ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಗೆ ಮನವಿ….

ಮೈಸೂರು,ಅಕ್ಟೋಬರ್,21,2020(www.justkannada.in): ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಯ ಮಧ್ಯದಲ್ಲಿರುವ ತಂಡೀಸಡಕ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆಯ ಪದಾಧಿಕಾರಿಗಳು ವನ್ಯಪ್ರಾಣಿ ಪಕ್ಷಿಸಂಕುಲ ಉಳಿಸಿ ಘೋಷಣೆಯುಳ್ಳ ನಾಮಫಲಕವನ್ನು ಹಿಡಿದು ಜಿಲ್ಲಾಡಳಿತ, ಮೃಗಾಲಯ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಗೆ ಮನವಿ ಮಾಡಿದರು. Block –traffic- Tandisadak road- Appeal - Mysore Zoo - Forest Department

ಇದೇ ಸಂದರ್ಭದಲ್ಲಿ  ಯುವಮುಖಂಡರಾದ ಎನ್.ಎಮ್ ನವೀನ್ ಕುಮಾರ್ ಅವರು ಮಾತನಾಡಿ, ಮೈಸೂರು ಮಹಾರಾಜರ ಕೊಡುಗೆ ಸಾಂಸ್ಕೃತಿಕ ರಾಜಧಾನಿಯಾಗಿ ಸ್ವಚ್ಚನಗರಿಯಾಗಿ ಮೈಸೂರು ವಿಶ್ವದೆಲ್ಲಡೆ ಜನಪ್ರಿಯವಾಗಲು ಕಾರಣವಾಯಿತು.  1892ರಲ್ಲಿ ಪ್ರಾರಂಭವಾದ ಮೈಸೂರು ಮೃಗಾಲಯದಲ್ಲಿ ಇಂದು 1320ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ, ಪ್ರವಾಸೋದ್ಯಮಕ್ಕೆ ಹೆಚ್ಚು ಆದಾಯ ಮೃಗಾಲಯ ಮತ್ತು ಕಾರಂಜಿಕೆರಯಿಂದ ಬರುತ್ತಿದೆ. ಬೇಸರದ ಸಂಗತಿಯೆಂದರೆ ತಂಡೀಸಡಕ್ ರಸ್ತೆಯಲ್ಲಿ ಶಾರ್ಟ್ ಕಟ್ ರಸ್ತೆಯೆಂದು ಪ್ರತಿನಿತ್ಯ ಭಾರೀ ವಾಹನಗಳು ಸಂಚರಿಸಲು ಪ್ರಾರಂಭವಾಗುತ್ತಿದೆ, ಇದರಿಂದ ಉಂಟಾಗುವ ವಿಪರೀತ ಶಬ್ದಮಾಲಿನ್ಯ ಮತ್ತು ಅನೈರ್ಮಲ್ಯ ವಾಯುಮಾಲಿನ್ಯದಿಂದ ಮೃಗಾಲಯ ಮತ್ತು ಕಾರಂಜಿಕೆರೆಯಲ್ಲಿ ವಾಸಿಸುತ್ತಿರುವ ವನ್ಯಸಂಕುಲಕ್ಕೆ ಕುತ್ತು ಬರುತ್ತಿದೆ ಇದರ ಕಡೆ ಯಾವೊಬ್ಬ ಸಂಬಂಧಪಟ್ಟ ಇಲಾಖೆಯಾಗಲಿ ಗಮನಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿನಿತ್ಯ ವಾಯುವಿಹಾರಕ್ಕೆ ತೆರೆಳುವ ನಾಗರೀಕರಿಗೆ ಮತ್ತು ಪಾದಚಾರಿಗಳಿಗೆ ಸುರಕ್ಷತೆಯಿಲ್ಲದೆ ಆತಂಕ ಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಅತಿಯಾದ ವೇಗದಿಂದ ಬರುವ ವಾಹನಗಳಿಂದ ಬಹಳ ತೊಂದರೆಯಾಗುತ್ತಿದೆ, ಹೊರಗಿನ ಪ್ರವಾಸಿಗರಿಗೆ ನಾವು ಎಷ್ಟು ಆದ್ಯತೆ ನೀಡುತ್ತವೋ ಅದರಂತೆಯೆ ಪ್ರಾಣಿಪಕ್ಷಿಗಳ ಸಂಕುಲನವನ್ನು ಸಹ  ವೈಜ್ಞಾನಿಕವಾಗಿ ಕಾಪಾಡಬೇಕಿದೆ. ಜಿಲ್ಲಾಡಳಿತ ಮತ್ತು ಮೃಗಾಲಯ ಪ್ರಾಧಿಕಾರ ತಂಡೀಸಡಕ್ ರಸ್ತೆಯಲ್ಲಿ ವಾಹನಸಂಚಾರ ಹಿಂಪಡೆದು ಸಾವಿರಾರು ಪಕ್ಷಿಪ್ರಾಣಿಗಳಿಗೆ ರಕ್ಷಿಸುವ ಮೂಲಕ ಮಾಲಿನ್ಯ ರಹಿತ ಪಾರಂಪಕತೆ ಸೂಕ್ಷ್ಮ ವಲಯವನ್ನು ಉಳಿಸುವ ಯೋಜನೆಯನ್ನ ಕಾರ್ಯಗತಕ್ಕೆ ತರಬೇಕಿದೆ ಎಂದು ಸಲಹೆ ನೀಡಿದರು.  Block –traffic- Tandisadak road- Appeal - Mysore Zoo - Forest Department

ಇದೇ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೊಳ ಜಗದೀಶ್ ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ಯೋಗೇಶ್ ನಾಯ್ಡು ,ನವೀನ್ ಕೆಂಪಿ ,ರಾಕೇಶ್ ಕುಂಚಿಟಿಗ ,ಸುಚೀಂದ್ರ, ಚಕ್ರಪಾಣಿ, ಶಶಿ ,ಹಾಗೂ ಇನ್ನಿತರರು ಹಾಜರಿದ್ದರು.

Key words: Block –traffic- Tandisadak road- Appeal – Mysore Zoo – Forest Department