ಮತ್ತೆ ಬ್ಲಾಕ್ ಫಂಗಸ್ ಆತಂಕ: ಮುಂಬೈನಲ್ಲಿ ಪ್ರಕರಣ ಪತ್ತೆ

Promotion

ಬೆಂಗಳೂರು, ಜನವರಿ 28, 2021 (www.justkannada.in): ಬ್ಲಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಆತಂಕ ಮತ್ತೆ ಆವರಿಸಿದೆ.

ಕರೋನಾ ಎರಡನೇ ಅಲೆಯಲ್ಲಿ ಬ್ಲಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಸಾವಿರಾರು ಜನರನ್ನು ಕಾಡಿತ್ತು. ಇದೀಗ ಆ ಆತಂಕ ಮತ್ತೆ ಆವರಿಸಿದೆ. ಕೊರೊನಾ 3ನೇ ಅಲೆ ವೇಳೆ ಇದು ಜನರನ್ನು ಮತ್ತೆ ಬೆಚ್ಚಿ ಬೀಳಿಸಿದೆ.

ಹಲವಾರು ಜನರ ಸಾವಿಗೆ ಕಾರಣವಾಗಿದ್ದ ಬ್ಲಾಕ್ ಫಂಗಸ್ ಮತ್ತೊಮ್ಮೆ ಸಮಸ್ಯೆಯಾಗಬಹುದೇ ಎಂಬ ಆತಂಕ ಮನೆಮಾಡಿದೆ.

ಇದೀಗ ಮುಂಬೈನಲ್ಲಿ ಮೊದಲ ಬ್ಲಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಪ್ರಕರಣ ದೃಢಪಟ್ಟಿದೆ.