ಇದು ಬಿಜೆಪಿಯ ಕರ್ಫ್ಯೂ, ಬಿಜೆಪಿಯ ಲಾಕ್ ಡೌನ್ –ಸರ್ಕಾರದ  ಕೋವಿಡ್ ರೂಲ್ಸ್ ಗೆ ಡಿ.ಕೆ ಶಿವಕುಮಾರ್  ಗರಂ.

Promotion

ಬೆಂಗಳೂರು,ಜನವರಿ,5,2022(www.justkannada.in):   ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದು ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ.

ಸರ್ಕಾರ ಜಾರಿಗೆ ತಂದಿರುವ ನಿರ್ಬಂಧ ನಿಯಮಗಳ ಬಗ್ಗೆ ಕೆಂಡಾಮಂಡಲರಾಗಿರುವ ಡಿ.ಕೆ ಶಿವಕುಮಾರ್  ಕೋವಿಡ್ ನಿಯಂತ್ರಣಕ್ಕೆ ತಂದಿರುವ ನಿರ್ಬಂಧ, ಲಾಕ್ ಡೌನ್ ಅಲ್ಲ, ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ ಡೌನ್ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿಯವರಿಗೆ ಇತ್ತೀಚೆಗೆ ರಾಜಕಾರಣ ಕಠಿಣವಾಗುತ್ತಿದೆ. ಜನರು ಕಠಿಣ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ನಮ್ಮನ್ನು ಎದುರಿಸಲಾಗದೆ ತಂದಿರುವ ಬಿಜೆಪಿ ನಿಯಮ, ಬಿಜೆಪಿ ಲಾಕ್ ಡೌನ್ ಅಷ್ಟೆ, ಇಲ್ಲಿ ಬಿಜೆಪಿಯ ಸ್ವಹಿತಾಸಕ್ತಿ ಎದ್ದು ಕಾಣುತ್ತಿದೆ , ಬಿಜೆಪಿಯವರಿಗೆ ಜನರ ಪ್ರಾಣ ಅಲ್ಲ. ಅವರ ಪಕ್ಷ ಮುಖ್ಯ. ನಾವು ನೀರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಇವರು ರಾಜಕಾರಣಕ್ಕಾಗಿ ನಮ್ಮ ಮೇಲಿನ ದ್ವೇಷದ ಮೇಲೆ ಕರ್ಫ್ಯೂ ಜಾರಿ ಮಾಡಿ ಜನಸಾಮಾನ್ಯರ ಮೇಲೆ ಗದಪ್ರಹಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನಾಶೀರ್ವಾದ ಯಾತ್ರೆ ಮಾಡಿದವರ ಮೇಲೆ ಕೇಸ್ ಹಾಕಿ. ಮೊದಲ ಅಲೆಯಲ್ಲಿ ಸ್ವಿಮ್ಮಿಂಗ್ ಫುಲ್ ನಲ್ಲಿ ಈಜಾಡಿದ್ಧ ಸಚಿವ ಸುಧಾಕರ್ ವಿರುದ್ಧ ಮೊದಲು ಪ್ರಕರಣ ದಾಖಲಿಸಲಿ. ಸಚಿವ ಶ್ರೀರಾಮುಲು ಬಿಎಸ್ ವೈ ವಿರುದ್ಧ ಧಾಖಲಿಸಲಿ. ರಾಜ್ಯದಲ್ಲಿ ಯಾರೂ ನಡೆಯದಂತೆ ನೋಡಿಕೊಳ್ಳಲು ಆಗುತ್ತಾ..? ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ನಮಗೆ ರ್ಯಾಲಿ, ಪ್ರತಿಭಟನೆ ಮಾಡಬೇಡಿ ಎಂದು ಸರ್ಕಾರದ ಸಚಿವರುಗಳು ಹೇಳಿದ್ದಾರೆ, ನಾವು ರ್ಯಾಲಿ, ಪ್ರತಿಭಟನೆ ಮಾಡುತ್ತಿಲ್ಲ, ಜನರಿಗೆ ನೀರಿಗಾಗಿ ನಡೆಯುತ್ತೇವೆ. ಜನವರಿ 9ರಿಂದ ನಾವು ಮಾಡುತ್ತಿರುವುದು ‘ನೀರಿಗಾಗಿ ನಡಿಗೆ ಜನರ ಹಿತಕ್ಕೋಸ್ಕರ, ನಾಡಿಗಾಗಿ, ಜನರ ಧ್ವನಿಯಾಗಿ ಬೆಂಗಳೂರಿನ ನಾಗರಿಕರಿಗೆ ಉತ್ತಮ ಆರೋಗ್ಯಯುತ ನೀರು ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೇವೆ. ಇದರಲ್ಲಿ ರಾಜಕೀಯವಿಲ್ಲ, ನಮ್ಮದು ಯಾತ್ರೆಯಲ್ಲ, ನೀರಿಗೋಸ್ಕರ ನಡಿಗೆ ಎಂದು  ತಿಳಿಸಿದರು.

Key words: BJP’s- curfew-kpcc-president- DK Shivakumar