ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ- ಮಂಡ್ಯ ಜಿಲ್ಲೆಯ ಜನರ ಬಳಿ ಸಿಎಂ ಬೊಮ್ಮಾಯಿ ಮನವಿ.

Promotion

ಮಂಡ್ಯ,ಆಗಸ್ಟ್,11,2022(www.justkannada.in): ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಂಡ್ಯ ಜನರು ಬದಲಾಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಮಂಡ್ಯದಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇದೆ. 59 ತಿಂಗಳು  ಅಭಿವೃದ್ದಿ ಕೆಲಸ 1 ತಿಂಗಳು ರಾಜಕೀಯ ಮಾಡೋಣ.  ಘೋಡಾ ಹೈ ಮೈದಾನ್ ಹೈ. ಯಾವ ಘೋಡಾಗೆ ಶಕ್ತಿ ಇದೆಯೋ ಅದು ಓಡುತ್ತೆ, ಮಂಡ್ಯ ಸಮಗ್ರ ಅಭಿವೃದ್ಧಿಯ ಭವಿಷ್ಯ ಬರೆಯುವ ಕಾಲ ಬಂದಿದೆ. ಹೊಸ ಭವಿಷ್ಯ ಬರೆಯಬೇಕಾದರೇ ಹಳೆಯ ಕಟ್ಟುಪಾಡುಗಳನ್ನ ಬಿಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಂಡ್ಯ ಜನರು ಬದಲಾಗಬೇಕು. ಮಂಡ್ಯ ಜನರಿಗೆ ಅಸಾಧ್ಯವಾದದ್ದು ಏನು ಇಲ್ಲ. ಯಾರ್ಯಾರಿಗೋ ಪಾಠ ಕಲಿಸಿದ್ದೀರಿ. ನಿಮಗಾಗಿ ಬದಲಾವಣೆ ತನ್ನಿ ಎಂದರು.

ಎಸಿಬಿ ರಚನೆ ಆದೇಶ ರದ್ಧು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ನನಗೆ ಈಗ ತಾನೇ ಮಾಹಿತಿ ಬಂದಿದೆ. ಬೆಂಗಳೂರಿಗೆ ಹೋದ ನಂತರ ಅಧಿಕಾರಿಗಳ ಜೊತೆ ಚರ್ಚಿಸಿ ಬಳಿಕ ಮುಂದಿನ ಕ್ರಮದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು.

Key words: BJP -win –next- assembly elections-CM Bommai -appeals – Mandya