ವಿಜಯ ಸಂಕಲ್ಪಯಾತ್ರೆ: ಮನೆ ಮನೆಗಳಿಗೆ ಬಿಜೆಪಿಯೇ ಭರವೆಸೆ ಎಂಬ ಭಿತ್ತಿಪತ್ರ ಅಂಟಿಸಿದ ಸಚಿವ ಆರ್.ಅಶೋಕ್

Promotion

ಮೈಸೂರು,ಜನವರಿ,27,2023(www.justkannada.in):  ಮೈಸೂರಿನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಕಂದಾಯ ಸಚಿವ ಆರ್ ಅಶೋಕ್  ಚಾಲನೆ ನೀಡಿದರು.

ನಗರದ ವಾರ್ಡ್ ನಂ 46 ರಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಚಾಲನೆ ನೀಡಿದ ಸಚಿವ ಆರ್.ಅಶೋಕ್ ವಾರ್ಡ್ ನ ಮನೆ ಮನೆಗಳಿಗೆ ತೆರಳಿ‌ ಬಿಜೆಪಿಯ ಸರ್ಕಾರದ ಸಾಧನೆಯ ಭಿತ್ತಿಪತ್ರ ಹಂಚಿಕೆ ಮಾಡಿದರು. ಮನೆ ಮನೆಗಳಿಗೆ ಬಿಜೆಪಿಯೇ ಭರವೆಸೆ ಎಂಬ ಭಿತ್ತಿಪತ್ರ ಅಂಟಿಸಿದರು.

ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಇಂದು ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರದ ಸಾಧನೆ ತಿಳಿಸಲಾಗುತ್ತಿದೆ.. ನರೇಂದ್ರ ಮೋದಿಯವರ ಸಾಧನೆ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.

ಮಂಡ್ಯದಲ್ಲಿ ಗೊ ಬ್ಯಾಕ್ ಅಶೋಕ್ ಪೋಸ್ಟರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಅದೆಲ್ಲ ಯಾರೋ  ಚಿಲ್ಲರೆಗಳ ಕೆಲಸ. ಅದಕ್ಕೆ ಮಾನ್ಯತೆ ನೀಡುವ ಅಗತ್ಯ ಇಲ್ಲ ಎಂದು ಜಾರಿಕೊಂಡರು.

Key words: BJP – vijay sankalpa yatre-mysore- minister-R. Ashok