ಹೆಚ್.ಡಿಕೆ ಎರಡು ಬಾರಿ ಸಿಎಂ ಆಗಿದ್ರು: ಅವರು ಸ್ವತಂತ್ರವಾಗಿ ಅಧಿಕಾರ ಹಿಡಿದಿದ್ರಾ..? – ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಗಣೀಶ್ ಕಾರ್ಣಿಕ್.

Promotion

ಮೈಸೂರು,ಮೇ,18,2022(www.justkannada.in): ಬಿಜೆಪಿಗೆ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸ ಇಲ್ಲ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ  ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಗಣೀಶ್ ಕಾರ್ಣಿಕ್ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಗಣೇಶ್ ಕಾರ್ಣಿಕ್, ದೇಶದಲ್ಲಿ 8 ವರ್ಷದಿಂದ ಬಿಜೆಪಿ ಅಧಿಕಾರ ನಡೆಸುತ್ತಿದೆ. ಸರಳ ಬಹುಮತದಿಂದ ಅಧಿಕಾರ ಹಿಡಿದಿದೆ. ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಹೆಚ್.ಡಿ.ಕುಮಾರಸ್ವಾಮಿಯವರು ಎರಡು ಬಾರಿ ಸಿಎಂ ಆಗಿದ್ರು. ಅವರು ಸ್ವತಂತ್ರವಾಗಿ ಅಧಿಕಾರ ಹಿಡಿದಿದ್ರಾ.? ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಕುಮಾರಸ್ವಾಮಿ ಹೇಳಿಕೆಗೆ ಪ್ರಾಮುಖ್ಯತೆ ಇಲ್ಲ. ಇದು ಅವರ ಅಪ್ರಬುದ್ಧತೆಯನ್ನ ತೋರಿಸುತ್ತೆ. ಬಿಜೆಪಿಗೆ ರಾಜ್ಯದ ಜನತೆಯ ಆಶೀರ್ವಾದ ಇದೆ. ಚುನಾವಣೆಗೆ ಇನ್ನ ಕೇವಲ 11 ತಿಂಗಳಷ್ಟೇ ಬಾಕಿ ಇದೆ‌. ಯಾರಿಗೆ ಬಹುಮತ ಬರುತ್ತೆ ಅನ್ನೊದನ್ನ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಬಿಜೆಪಿಯ ಆಡಳಿತ ವೈಖರಿ ನೋಡಿ ಪದವೀಧರರು ಬಿಜೆಪಿಗೆ ಮತ ನೀಡುತ್ತಾರೆ.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ. ನಾಳೆ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ನಾಮಪತ್ರ ಸಲ್ಲಿಸಲಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಉತ್ತಮ ನಿರ್ವಹಣೆ ಮಾಡಿದೆ. ಬಿಜೆಪಿಯ ಆಡಳಿತ ವೈಖರಿ ನೋಡಿ ಚುನಾವಣೆಯಲ್ಲಿ ಪದವೀಧರರು ಬಿಜೆಪಿಗೆ ಮತ ನೀಡಲಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳ ಆರ್ಥಿಕ ಸ್ಥಿತಿ ಕುಗ್ಗಿದ್ದರೂ ಭಾರತದಲ್ಲಿ ಮಾತ್ರ ಉತ್ತಮ ನಿರ್ವಹಣೆಯಾಗುತ್ತಿದೆ. ದೇಶದ ಜನರಿಗೆ ದಾಖಲೆ ಮಟ್ಟದಲ್ಲಿ ಲಸಿಕೆ ನೀಡಲಾಗಿದೆ. ಇದೆಲ್ಲವನ್ನು ಗಮನಿಸಿ ಪದವೀಧರರು ಬಿಜೆಪಿ ಗೆಲ್ಲಿಸಲಿದ್ದಾರೆ ಎಂದು ಗಣೇಶ್ ಕಾರ್ಣಿಕ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಮ್ಮನ್ನು ಕಾಪಿ ಮಾಡುತ್ತಿದೆ.

ಇದೇ ವೇಳೆ ಕಾಂಗ್ರೆಸ್ ಟೀಕಿಸಿದ ಗಣೇಶ್ ಕಾರ್ಣಿಕ್,  ಕಾಂಗ್ರೆಸ್ ನಮ್ಮನ್ನು ಕಾಪಿ ಮಾಡುತ್ತಿದೆ. ನಮ್ಮನ್ನು ನೋಡಿಕೊಂಡು ಕಾಂಗ್ರೆಸ್ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಚಿಂತನಾ ಶಿಬಿರ ಆರಂಭಿಸಿದ್ದು ಬಿಜೆಪಿ.  ಈಗ ಇದನ್ನೇ ಇಂದು ಕಾಂಗ್ರೆಸ್ ಫಾಲೋ ಮಾಡ್ತಿದೆ. ಸೋಲಿನ ಹತಾಶೆಯಿಂದ ಬಿಜೆಪಿಯ ಮಾರ್ಗಗಳನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

Key words: BJP –state- media- spokesperson -Ganesh Karnik-Former CM-HD kumaraswamy